ADVERTISEMENT

ಕೊಪಾ ಟೂರ್ನಿ: ಅಮೆರಿಕ, ಉರುಗ್ವೆ ಶುಭಾರಂಭ

ಏಜೆನ್ಸೀಸ್
Published 24 ಜೂನ್ 2024, 16:23 IST
Last Updated 24 ಜೂನ್ 2024, 16:23 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಅರ್ಲಿಂಗ್ಟನ್, ಅಮೆರಿಕ: ನಾಯಕ ಕ್ರಿಸ್ಟಿಯನ್ ಪುಲಿಸಿಕ್ ಮತ್ತು ಫೋಲಾರಿನ್ ಬಾಲೋಗನ್ ಅವರು ಗಳಿಸಿದ ಗೋಲುಗಳ ನೆರವಿನಿಂದ ಅಮೆರಿಕ ತಂಡವು ಕೊಪಾ ಅಮೆರಿಕ ಟೂರ್ನಿಯಲ್ಲಿ 2–0 ಗೋಲುಗಳಿಂದ ಬೊಲಿವಿಯಾ ತಂಡವನ್ನು ಮಣಿಸಿತು.  

ಮಯಾಮಿಯ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ 'ಸಿ' ಗುಂಪಿನ ಮತ್ತೊಂದು ಪಂದ್ಯದಲ್ಲಿ 15 ಬಾರಿಯ ಕೊಪಾ ಚಾಂಪಿಯನ್ ಉರುಗ್ವೆ 3-1 ಗೋಲುಗಳಿಂದ ಪನಾಮ ತಂಡವನ್ನು ಸೋಲಿಸಿತು.

ADVERTISEMENT

ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ ಎಟಿ ಅಂಡ್ ಟಿ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕ ನಾಯಕ ಪುಲಿಸಿಕ್ ಮೂರನೇ ನಿಮಿಷ ಗೋಲು ಗಳಿಸಿದರು. ಸ್ಟ್ರೈಕರ್ ಫೋಲಾರಿನ್ ಬಾಲೊಗ‌ನ್‌ ಅವರು 44ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸುವ ಮೂಲಕ ಮುನ್ನಡೆ ಒದಗಿಸಿದರು. ಈ ಗೋಲಿಗೂ ಫೋಲಾರಿನ್ ಅವರ ಉತ್ತಮ ಪಾಸ್‌ ನೆರವಾಯಿತು.

ಆರಂಭಿಕ ಮುನ್ನಡೆಯ ಹೊರತಾಗಿಯೂ ದೊರೆತ ಅವಕಾಶಗಳಲ್ಲಿ ಗೋಲು ಗಳಿಸಲು ಅಮೆರಿಕಕ್ಕೆ ಸಾಧ್ಯವಾಗಲಿಲ್ಲ. ಒರಟು ಆಟವಾಡಿದ ಬೊಲಿವಿಯಾದ ಲಿಯೋನೆಲ್ ಜಸ್ಟಿನಿಯಾನೊ, ಗೇಬ್ರಿಯಲ್ ವಿಲ್ಲಾಮಿಲ್ ಮತ್ತು ಲೂಯಿಸ್ ಹಕ್ವಿನ್ ಅವರಿಗೆ ರೆಫ್ರಿ ಎಚ್ಚರಿಕೆ ನೀಡಿದರು.

‘ನಿಸ್ಸಂಶಯವಾಗಿ ಆರಂಭಿಕ ಗೋಲು ನಮಗೆ ಸಾಕಷ್ಟು ನೆರವಾಯಿತು’ ಎಂದು ಪುಲಿಸಿಕ್ ಹೇಳಿದರು.

ಉರುಗ್ವೆಗೆ ಜಯ:

ಪನಾಮಾ ತಂಡದ ವಿರುದ್ಧ ಜಯ ಸಾಧಿಸಿರುವ ಉರುಗ್ವೆ ಮೂರು ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. 16ನೇ ನಿಮಿಷ ಮಾರ್ಸೆಲೊ ಬಿಯೆಲ್ಸಾ ಮೊದಲ ಗೋಲು ಗಳಿಸಿದರು. 85ನೇ ನಿಮಿಷ ಡಾರ್ವಿನ್ ನುನೆಜ್ ಅಂತರ ಹೆಚ್ಚಿಸಿದರು.

ಆರು ನಿಮಿಷ ತರುವಾಯ ಮ್ಯಾಟಿಯಾಸ್ ವಿನಾಸ್ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ಪಂದ್ಯದ ಕೊನೆಯ ಕ್ಷಣದಲ್ಲಿ ಪನಾಮ ಪರ ಮೈಕೆಲ್ ಅಮೀರ್ ಮುರಿಲ್ಲೊ (90+4) ಗೋಲು ಗಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.