ADVERTISEMENT

Tokyo Olympics: ಫುಟ್‌ಬಾಲ್‌- ಅಮೆರಿಕ ಮಹಿಳಾ ತಂಡದ ಜಯಭೇರಿ

ಏಜೆನ್ಸೀಸ್
Published 30 ಜುಲೈ 2021, 19:31 IST
Last Updated 30 ಜುಲೈ 2021, 19:31 IST
ಅಮೆರಿಕದ ಅಲೆಕ್ಸ್ ಮಾರ್ಗನ್ (ಬಲ) ಮತ್ತು ನೆದರ್ಲೆಂಡ್ಸ್‌ನ ಸ್ಟೆಫನಿ ವ್ಯಾನ್ ಡೆರ್ ಚೆಂಡಿಗಾಗಿ ಪೈಪೋಟಿ ನಡೆಸಿದರು –ಎಎಫ್‌ಪಿ ಚಿತ್ರ
ಅಮೆರಿಕದ ಅಲೆಕ್ಸ್ ಮಾರ್ಗನ್ (ಬಲ) ಮತ್ತು ನೆದರ್ಲೆಂಡ್ಸ್‌ನ ಸ್ಟೆಫನಿ ವ್ಯಾನ್ ಡೆರ್ ಚೆಂಡಿಗಾಗಿ ಪೈಪೋಟಿ ನಡೆಸಿದರು –ಎಎಫ್‌ಪಿ ಚಿತ್ರ   

ಟೋಕಿಯೊ: ಮೆಗಾನ್ ರಪಿನೊ ಮತ್ತು ಗೋಲ್‌ಕೀಪರ್ ಅಲಿಸಾ ನಹೆರ್ ಅವರ ಅಮೋಘ ಆಟದ ಬಲದಿಂದ ಅಮೆರಿಕ ಮಹಿಳಾ ತಂಡ ಒಲಿಂಪಿಕ್ಸ್‌ನ ಮಹಿಳಾ ಫುಟ್‌ಬಾಲ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಜಯ ಗಳಿಸಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 2–2ರ ಸಮಬಲ ಸಾಧಿಸಿದ್ದವು. ಹೀಗಾಗಿ ಪೆನಾಲ್ಟಿ ಕಿಕ್ ಮೊರೆ ಹೋಗಬೇಕಾಯಿತು. ಅಮೆರಿಕ 4–2ರಲ್ಲಿ ಜಯ ಗಳಿಸಿತು.

18ನೇ ನಿಮಿಷದಲ್ಲಿ ಗೋಲು ಗಳಿಸಿದ ಮೆಡೀಮಾ ಅವರು ನೆದರ್ಲೆಂಡ್ಸ್‌ಗೆ ಮುನ್ನಡೆ ಗಳಿಸಿಕೊಟ್ಟರು. 28ನೇ ನಿಮಿಷದಲ್ಲಿ ಮೀವಿಸ್‌ ಗೋಲು ಗಳಿಸಿ ಅಮೆರಿಕಕ್ಕೆ ಸಮಬಲ ಗಳಿಸಿಕೊಟ್ಟರು. 31ನೇ ನಿಮಿಷದಲ್ಲಿ ವಿಲಿಯಮ್ಸ್ ಗೋಲಿನೊಂದಿಗೆ ಅಮೆರಿಕ ಮುನ್ನಡೆ ಗಳಿಸಿತು. 54ನೇ ನಿಮಿಷದಲ್ಲಿಮೆಡೀಮಾ ಮತ್ತೊಮ್ಮೆ ಮಿಂಚಿದರು.

ಸ್ಯಾಮ್ ಕೆರ್ ಗಳಿಸಿದ ಎರಡು ಗೋಲುಗಳ ಬಲದಿಂದ ಬ್ರಿಟನ್ ವಿರುದ್ಧ ಆಸ್ಟ್ರೇಲಿಯಾ 4–3ರ ಜಯ ಸಾಧಿಸಿತು. ಈ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇರಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.