ಲಂಡನ್ (ಎಎಫ್ಪಿ): ಐದು ವರ್ಷ ತಂಡವೊಂದರ ಗೋಲುಕೀಪಿಂಗ್ ಮಾಡಲು ₹597 ಕೋಟಿ ಮೊತ್ತದ ಒಪ್ಪಂದ!
ಹೌದು, ಬ್ರೆಜಿಲ್ನ ಫುಟ್ಬಾಲ್ ಆಟಗಾರ ಅಲಿಸನ್ ರಾಮ್ಸೆಸ್ ಬೇಕರ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗಿದ್ದಾರೆ.
25 ವರ್ಷದ ಅಲಿಸನ್ ಸದ್ಯ ಇಟಲಿಯ ರೋಮಾ ತಂಡದ ಪರ ಆಡುತ್ತಿದ್ದು ಲಿವರ್ಪೂಲ್ ತಂಡದ ಜೊತೆ ಹೊಸ ಒಪ್ಪಂದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಚಾಂಪಿಯನ್ಸ್ ಲೀಗ್ ಟೂರ್ನಿಯ ಫೈನಲ್ನಲ್ಲಿ ನೀರಸ ಆಟ ಆಡಿದ್ದರಿಂದ ಗೋಲ್ ಕೀಪರ್ ಲಾರಿಸ್ ಕರಿಯುಸ್ ಅವರನ್ನು ಕೈಬಿಡಲು ಲಿವರ್ಪೂಲ್ ನಿರ್ಧರಿಸಿದ್ದು ಅಲಿಸನ್ ಅವರನ್ನು ಕರೆಸಿಕೊಳ್ಳಲು ಬಯಸಿದೆ. ಅಲಿಸನ್ ಮೇಲೆ ಚೆಲ್ಸಿ ತಂಡ ಕೂಡ ನೋಟ ಇರಿಸಿದೆ ಎನ್ನಲಾಗಿದೆ.
ಇತ್ತೀಚೆಗೆ ಅಲಿಸನ್ ಬಿಡುಗಡೆ ಮಾಡಿರುವ ವಿಡಿಯೊ ತುಣುಕೊಂದರಲ್ಲಿ ರೋಮಾ ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತಿರುವುದು ಕಂಡು ಬಂದಿದೆ. ‘ಕೆಲವೇ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ’ ಎಂದು ಕೂಡ ವಿಡಿಯೊದಲ್ಲಿ ನುಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.