ADVERTISEMENT

ಪುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌: ಯಂಗ್‌ ಬ್ಲೂಸ್‌ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಮೇ 2024, 16:09 IST
Last Updated 4 ಮೇ 2024, 16:09 IST
ಕೆಎಸ್‌ಎಫ್‌ಎ ಮಹಿಳಾ ‘ಬಿ’ ಡಿವಿಷನ್‌ ಪುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಯಂಗ್‌ ಬ್ಲೂಸ್‌ ಎಲೀಟ್‌ ಎಫ್‌ಸಿ ತಂಡಕ್ಕೆ ಟ್ರೋಫಿ ಹಸ್ತಾಂತರಿಸಲಾಯಿತು.
ಕೆಎಸ್‌ಎಫ್‌ಎ ಮಹಿಳಾ ‘ಬಿ’ ಡಿವಿಷನ್‌ ಪುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಯಂಗ್‌ ಬ್ಲೂಸ್‌ ಎಲೀಟ್‌ ಎಫ್‌ಸಿ ತಂಡಕ್ಕೆ ಟ್ರೋಫಿ ಹಸ್ತಾಂತರಿಸಲಾಯಿತು.   

ಬೆಂಗಳೂರು: ಯಂಗ್‌ ಬ್ಲೂಸ್‌ ಎಲೀಟ್‌ ಎಫ್‌ಸಿ ತಂಡವು ಕೆಎಸ್‌ಎಫ್‌ಎ ಮಹಿಳಾ ‘ಬಿ’ ಡಿವಿಷನ್‌ ಪುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಯಂಗ್‌ ಬ್ಲೂಸ್‌ ತಂಡವು 3–0 ಯಿಂದ ಆಫ್‌ಸೈಡ್ ಟ್ರ್ಯಾಪ್ ಎಫ್‌ಸಿ ತಂಡವನ್ನು ಮಣಿಸಿತು. ಯಂಗ್‌ ಪರ ತಿಯಾ ಝಮೊರಾ ಫರ್ನಾಂಡಿಸ್ (6ನೇ ಮತ್ತು 8ನೇ ನಿಮಿಷ) ಮತ್ತು ಶನಯಾ ಮ್ಯಾಕ್ಸನ್ ಡಿಕುನ್ಹ (15ನೇ ನಿ) ಗೋಲು ಗಳಿಸಿದರು.

ಯಂಗ್ ಬ್ಲೂಸ್ ಮತ್ತು ರನ್ನರ್ಸ್‌ ಅಪ್‌ ಆಫ್‌ಸೈಡ್‌ ಟ್ರ್ಯಾಪ್‌ ತಂಡಗಳು ಕೆಎಸ್‌ಎಫ್‌ಎ ಮಹಿಳಾ ‘ಎ’ ಡಿವಿಷನ್‌ಗೆ ಬಡ್ತಿ ಪಡೆದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.