ADVERTISEMENT

ಒಲಿಂಪಿಕ್‌ನಲ್ಲಿ ಚಿನ್ನ ಗೆದ್ದು ನಿವೃತ್ತಿ: ಮೇರಿ

ಆರು ಬಾರಿಯ ವಿಶ್ವಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ದಿಢೀರ್‌ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 18:06 IST
Last Updated 6 ಜೂನ್ 2019, 18:06 IST
ಮೇರಿ ಕೋಮ್‌– ಪಿಟಿಐ ಚಿತ್ರ
ಮೇರಿ ಕೋಮ್‌– ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಹಲವು ದಿನಗಳ ಊಹಾಪೋಹಗಳ ಬಳಿಕ ಆರು ಬಾರಿಯ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ ಭಾರತದ ಮೇರಿ ಕೋಮ್‌ ನಿವೃತ್ತಿ ನಿರ್ಧಾರ ಪ್ರಕಟಿಸಿದರು.

ಟೋಕಿಯೊ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಜಯಿಸಿ ಗ್ಲೌಸ್‌ ಕಳಚುವೆ ಎಂದು ಗುರುವಾರ ಮೇರಿ ತಿಳಿಸಿದರು.

’ನನ್ನ ಮುಂದಿರುವ ಪ್ರಮುಖ ಗುರಿ ಒಲಿಂಪಿಕ್‌ ಚಿನ್ನ ಗೆಲ್ಲುವುದು’ ಎಂದು ಖಾಸಗಿ ಕಂಪೆನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ
ಪಾಲ್ಗೊಂಡು ಅವರು ಮಾತನಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.