ADVERTISEMENT

ನೆಟ್‌ಬಾಲ್‌: ಫೈನಲ್‌ಗೆ ಶ್ರೀಲಂಕಾ, ಸಿಂಗಪುರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 23:30 IST
Last Updated 26 ಅಕ್ಟೋಬರ್ 2024, 23:30 IST
ಭಾರತ ಮತ್ತು ಚೀನಾ ತೈಪೆ ಆಟಗಾರ್ತಿರ ಸೆಣಸಾಟ
ಭಾರತ ಮತ್ತು ಚೀನಾ ತೈಪೆ ಆಟಗಾರ್ತಿರ ಸೆಣಸಾಟ   

ಬೆಂಗಳೂರು: ಹಾಲಿ ಚಾಂಪಿಯನ್‌ ಶ್ರೀಲಂಕಾ ಮತ್ತು ಸಿಂಗಪುರ ತಂಡಗಳು ಇಲ್ಲಿ ನಡೆಯುತ್ತಿರುವ 13ನೇ ಏಷ್ಯನ್‌ ನೆಟ್‌ಬಾಲ್‌ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದವು. ಭಾರತ ತಂಡವು ಟೂರ್ನಿಯಲ್ಲಿ 9ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.

ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಆರು ಬಾರಿಯ ಚಾಂಪಿಯನ್‌ ಶ್ರೀಲಂಕಾ ತಂಡವು 71–47ರಿಂದ ಹಾಂಗ್‌ಕಾಂಗ್‌ ತಂಡವನ್ನು ಸೋಲಿಸಿದರೆ, ಸಿಂಗಪುರ 54–46ರಿಂದ ಮಲೇಷ್ಯಾ ತಂಡವನ್ನು ಮಣಿಸಿತು. ಫೈನಲ್‌ ಹಣಾಹಣಿ ಭಾನುವಾರ ನಡೆಯಲಿದೆ.

ಇದಕ್ಕೂ ಮೊದಲು ನಡೆದ ಲೀಗ್‌ನಲ್ಲಿ ಭಾರತ ತಂಡವು 56–37ರಿಂದ ಚೀನಾ ತೈಪೆಯನ್ನು ಸೋಲಿಸಿತು. ಇತರ ಪಂದ್ಯಗಳಲ್ಲಿ ಸೌದಿ ಅರೇಬಿಯಾ 44–22ರಿಂದ ಇರಾಕ್‌ ತಂಡವನ್ನು; ಜಪಾನ್‌ 44–33ರಿಂದ ಬಹರೇನ್‌ ತಂಡವನ್ನು; ಥಾಯ್ಲೆಂಡ್‌ 57–39ರಿಂದ ಮಾಲ್ಡೀವ್ಸ್‌ ತಂಡವನ್ನು ಸೋಲಿಸಿತು.

ADVERTISEMENT

ಭಾನುವಾರ ಫೈನಲ್‌ನಲ್ಲಿ ಶ್ರೀಲಂಕಾ ಮತ್ತು ಸಿಂಗಪುರ ತಂಡಗಳು ಸೆಣಸಲಿವೆ. ಮೂರನೇ ಸ್ಥಾನಕ್ಕಾಗಿ ಹಾಂಗ್‌ಕಾಂಗ್‌ ಮತ್ತು ಮಲೇಷ್ಯಾ ತಂಡಗಳು ಮುಖಾಮುಖಿಯಾಗುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.