ನವದೆಹಲಿ: ಭಾರತದ ಪ್ರಮುಖ 400 ಮೀ. ಓಟಗಾರ್ತಿ ದೀಪಾನ್ಶಿ ಅವರು ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿಕೊಂಡಿದ್ದು, ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ ಅವರನ್ನು ಅಮಾನತುಗೊಳಿಸಿದೆ.
ಇತ್ತೀಚಿಗೆ ಪಂಚಕುಲಾದಲ್ಲಿ ನಡೆದ ರಾಷ್ಟ್ರೀಯ ಅಂತರ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಪರೀಕ್ಷೆ ನಡೆದಿತ್ತು. 21 ವರ್ಷದ ದೀಪಾನ್ಶಿ 52.01 ಸೆಕೆಂಡುಗಳಲ್ಲಿ ಗುರಿಮುಟ್ಟಿ ಎರಡನೇ ಸ್ಥಾನ ಪಡೆದಿದ್ದರು. ಸ್ಪರ್ಧೆಯಲ್ಲಿ ಕಿರಣ್ ಪಹಲ್ (50.9 ಸೆ.) ಮೊದಲ ಸ್ಥಾನ ಗಳಿಸಿದ್ದರು.
ಸ್ಪರ್ಧಾವೇಳೆಯ ಮದ್ದುಸೇವನೆ ಮಾದರಿಯನ್ನು ಜೂನ್ 27ರಂದು (ಹೀಟ್ಸ್ ಓಟದ ಅಥವಾ ಸೆಮಿಫೈನಲ್ ನಂತರ) ಪಡೆದುಕೊಳ್ಳಲಾಗಿತ್ತು. ಇದರಲ್ಲಿ ಅನಬಾಲಿಕ್ ಸ್ಟಿರಾಯಿಡ್ ಅಂಶ ಒಳಗೊಂಡಿದೆ.
ಪಂಚಕುಲಾದ ಸ್ಪರ್ಧೆಗಳ (ಜೂನ್ 27–30) ನಂತರ ಮದ್ದುಪರೀಕ್ಷೆಯಲ್ಲಿ ಅಥ್ಲೀಟ್ ಒಬ್ಬರು ಸಿಲುಕಿಕೊಂಡ ಮೊದಲ ಪ್ರಕರಣ ಇದಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಇದು ಕೊನೆಯ ಅರ್ಹತಾ ಟೂರ್ನಿ ಆಗಿತ್ತು. ರಾಷ್ಟ್ರೀಯ ಶಿಬಿರದಲ್ಲಿ ದೀಪಾನ್ಶಿ ತರಬೇತಿ ಪಡೆಯುತ್ತಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.