ಮಂಗಳೂರು: 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಷಿಪ್ ಸೆ.10ರಿಂದ 13ರವರೆಗೆ ನಗರದ ಎಮ್ಮೆಕೆರೆ ಅಂತರರಾಷ್ಟ್ರೀಯ ಈಜುಕೊಳದಲ್ಲಿ ನಡೆಯಲಿದೆ.
ಭಾರತ ಸ್ವಿಮ್ಮಿಂಗ್ ಫೆಡರೇಷನ್ ಸಹಕಾರದಲ್ಲಿ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಆಯೋಜಿಸಿರುವ ನಾಲ್ಕು ದಿನಗಳ ಚಾಂಪಿಯನ್‌ಷಿಪ್‌ನಲ್ಲಿ ದೇಶದ 31 ರಾಜ್ಯಗಳ 500ಕ್ಕೂ ಹೆಚ್ಚು ಈಜುಪಟುಗಳು ಭಾಗವಹಿಸಲಿದ್ದಾರೆ ಎಂದು ಚಾಂಪಿಯನ್‌ಷಿಪ್‌ನ ಸಂಘಟನಾ ಕಾರ್ಯದರ್ಶಿ ಸತೀಶ್‌ಕುಮಾರ್ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹೆಸರಾಂತ ಈಜುಪಟಗಳಾದ ಶ್ರೀಹರಿ ನಟರಾಜ್, ಲಿಖಿತ್ ಎಸ್.ಪಿ, ಅನೀಶ್ ಗೌಡ, ಎಸ್.ಸಿವಾ, ಪೃಥ್ವಿ, ಆನಂದ್ ಎ.ಎಸ್, ಮಿಹಿರ್ ಅಮ್ರೆ, ರಿಷಬ್ ದಾಸ್, ದೇವಾಂಶ್ ಪರ್ಮರ್, ಧನುಶ್ ಎಸ್., ಸೋನು ದೇಬ್‌ನಾಥ್, ಹರ್ಷಿತಾ ಜಯರಾಂ ಮಾನವಿ ರ್ಮಾ, ಪ್ರತಿಷ್ಠಾ ದಂಗಿ, ಆಸ್ಥಾ ಚೌಧರಿ, ವೃತ್ತಿ ಅಗ್ರವಾಲ್, ಅಂತಿಕಾ ಚವನ್, ಶಿವಾಂಗಿ ಶರ್ಮಾ, ಭವ್ಯಾ ಸಚದೇವ ಮೊದಲಾದವರು ಭಾಗವಹಿಸುವರು ಎಂದರು.
ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಅಧ್ಯಕ್ಷ ಗೋಪಾಲ ಬಿ. ಹೊಸೂರ ಮೇಲುಸ್ತುವಾರಿಯಲ್ಲಿ ನಡೆಯುವ ಚಾಂಪಿಯನ್‌ಷಿಪ್ ಅನ್ನು ಸೆ.10ರ ಸಂಜೆ 5 ಗಂಟೆಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸುವರು. ಭಾರತದ ದೊಡ್ಡ ಈಜು ಚಾಂಪಿಯನ್‌ಷಿಪ್ ಇದಾಗಿದ್ದು, 2021ರಲ್ಲಿ ಕರ್ನಾಟಕದ ಆತಿಥ್ಯದಲ್ಲಿ ಬೆಂಗಳೂರಿನಲ್ಲಿ ಸ್ಪರ್ಧೆ ನಡೆದಿತ್ತು ಎಂದು ಹೇಳಿದರು.
ಪ್ರಮುಖರಾದ ಕಮಲೇಶ್ ನಾನಾವತಿ, ರಾಜಕುಮಾರ್, ನವೀನ್, ಶಿವಾನಂದ ಗಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.