ADVERTISEMENT

ಚೆಸ್‌: ಭಾರತೀಯ ಮೂಲದ ಪೋರನ ವಿಶ್ವದಾಖಲೆ

ಪಿಟಿಐ
Published 20 ಫೆಬ್ರುವರಿ 2024, 15:52 IST
Last Updated 20 ಫೆಬ್ರುವರಿ 2024, 15:52 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಸಿಂಗಪುರ: ಭಾರತ ಮೂಲದ ಕೇವಲ ಎಂಟು ವರ್ಷದ ಪೋರ, ಸ್ವಿಜರ್ಲೆಂಡ್‌ನಲ್ಲಿ ನಡೆಯುತ್ತಿರುವ ಬರ್ಗ್‌ಡೋರ್ಫರ್‌ ಸ್ಟಾಡ್‌ಥೇಯಸ್ ಓಪನ್ ಟೂರ್ನಿಯಲ್ಲಿ ಪೋಲೆಂಡ್‌ನ ಗ್ರ್ಯಾಂಡ್‌ಮಾಸ್ಟರ್ ಜೇಸೆಕ್ ಸ್ಟೊಪಾ ಅವರನ್ನು ಸೋಲಿಸಿ ದಾಖಲೆ ಸ್ಥಾಪಿಸಿದ್ದಾರೆ.

‘ಶಾಸ್ತ್ರೀಯ ಮಾದರಿಯ ಚೆಸ್‌’ನಲ್ಲಿ ಗ್ರ್ಯಾಡ್‌ಮಾಸ್ಟರ್‌ ಒಬ್ಬರನ್ನು ಸೋಲಿಸಿದ ಅತಿ ಕಿರಿಯ ಆಟಗಾರನೆಂಬ ಹಿರಿಮೆ ಸಿಂಗಪುರವನ್ನು ಪ್ರತಿನಿಧಿಸುತ್ತಿರುವ ಅಶ್ವಥ್ ಕೌಶಿಕ್ ಅವರದಾಯಿತು ಎಂದು ‘ಚಾನೆಲ್‌ ನ್ಯೂಸ್‌ ಏಷ್ಯಾ’ ತಿಳಿಸಿದೆ. ಸ್ಟೊಪಾ ಅವರ ವಯಸ್ಸು 37.

ADVERTISEMENT

ಈ ಹಿಂದಿನ ದಾಖಲೆ ಸರ್ಬಿಯಾದ ಲಿಯೊನಿದ್ ಇವಾನೊವಿಕ್ ಹೆಸರಿನಲ್ಲಿತ್ತು. ಕೆಲ ತಿಂಗಳ ಹಿಂದಷ್ಟೇ ಅವರು ಬಲ್ಗೇರಿಯಾದ ಗ್ರ್ಯಾಂಡ್‌ಮಾಸ್ಟರ್‌ ಮಿಲ್ಕೊ ಪೊಪ್ಚೆವ್ ಅವರನ್ನು ಬೆಲ್‌ಗ್ರೇಡ್ ಓಪನ್ ಟೂರ್ನಿಯ ಪಂದ್ಯದಲ್ಲಿ ಸೋಲಿಸಿದ್ದರು. ಲಿಯೊನಿದ್ ಅವರು ಅಶ್ವಥ್ ಅವರಿಗಿಂತ ಕೆಲವು ತಿಂಗಳು  ದೊಡ್ಡವರು.

ಭಾರತೀಯ ಪೌರತ್ವ ಹೊಂದಿರುವ ಅಶ್ವಥ್ ಕುಟುಂಬ 2017ರಲ್ಲಿ ಸಿಂಗಪುರಕ್ಕೆ ಹೋಗಿ ನೆಲೆಸಿತ್ತು. ಪ್ರಸಕ್ತ ಅಶ್ವಥ್ ಫಿಡೆ ಕ್ರಮಾಂಕಪಟ್ಟಿಯಲ್ಲಿ 37,338ನೇ ಸ್ಥಾನದಲ್ಲಿದ್ದಾರೆ. 2022ರಲ್ಲಿ ಅವರು ಮೊದಲ ಬಾರಿ ಸುದ್ದಿಯಾಗಿದ್ದರು. ಆ ವರ್ಷ ಅವರು ಪೂರ್ವ ಏಷ್ಯಾ ಯುವ ಚಾಂಪಿಯನ್‌ಷಿಪ್‌ನಲ್ಲಿ ಮೂರೂ ಮಾದರಿಯಲ್ಲಿ (ಕ್ಲಾಸಿಕ್‌, ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌) ಚಾಂಪಿಯನ್ ಕಿರೀಟ ಧರಿಸಿದ್ದರು.

ಸಿಂಗಪುರ ಚೆಸ್‌ ಫೆಡರೇಷನ್ ಸಿಇಒ ಕೆವಿನ್ ಗ್ಹೊ ಅವರು ಅಶ್ವಥ್ ಸಾಧನೆಯನ್ನು ಕೊಂಡಾಡಿದ್ದು ಎಕ್ಸ್‌ನಲ್ಲಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.