ADVERTISEMENT

ಹಾಕಿ ಲೀಗ್‌ ಚಾಂಪಿಯನ್‌ಷಿಪ್‌: ಕಸ್ಟಮ್ಸ್‌ ಮತ್ತು ಜಿಎಸ್‌ಟಿ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 17:59 IST
Last Updated 8 ಜುಲೈ 2024, 17:59 IST
<div class="paragraphs"><p>ಹಾಕಿ –ಪ್ರಾತಿನಿಧಿಕ ಚಿತ್ರ</p></div>

ಹಾಕಿ –ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಸಾಂಘಿಕ ಆಟವಾಡಿದ ಕಸ್ಟಮ್ಸ್‌ ಮತ್ತು ಜಿಎಸ್‌ಟಿ ತಂಡವು ಇಲ್ಲಿ ನಡೆಯುತ್ತಿರುವ ಕರ್ನಾಟಕ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ 8ನೇ ಆವೃತ್ತಿಯ ಟೂರ್ನಿಯ ಪಂದ್ಯದಲ್ಲಿ ಜಯ ಗಳಿಸಿತು. 

ಸೋಮವಾರ ನಡೆದ ಪಂದ್ಯದಲ್ಲಿ ಕಸ್ಟಮ್ಸ್‌ ಮತ್ತು ಜಿಎಸ್‌ಟಿ ತಂಡವು 3–2ರಿಂದ ಬಾಯ್ಸ್ ಸ್ಪೋರ್ಟ್ಸ್ ಕಂಪನಿ, ಎಂಇಜಿ ವಿರುದ್ಧ ಗೆಲುವು ಸಾಧಿಸಿತು.

ADVERTISEMENT

ಕಸ್ಟಮ್ಸ್‌ ಮತ್ತು ಜಿಎಸ್‌ಟಿ ತಂಡದ ಪರ ದ್ವೈತ್ ನಾಚಪ್ಪ (8ನೇ ನಿ), ಪೂವಣ್ಣ ಸಿ.ಬಿ (20ನೇ ನಿ) ಮತ್ತು ವಿಶ್ವಾಸ್ .ಜಿ. (55ನೇ ನಿ) ಗೋಲು ಗಳಿಸಿದರು. ಬಾಯ್ಸ್ ಸ್ಪೋರ್ಟ್ಸ್ ಕಂಪನಿ ತಂಡದ ಪರ ನಿತೇಶ್ ಶರ್ಮಾ (38ನೇ ನಿ) ಮತ್ತು ಅರ್ಜುನ್ (46ನೇ ನಿ) ತಲಾ ಒಂದು ಗೋಲು ಗಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.