ADVERTISEMENT

49ನೇ ಜೂನಿಯರ್‌ ಅಕ್ವಟಿಕ್‌ ಚಾಂಪಿಯನ್‌ಷಿಪ್‌ | ವಾಟರ್‌ ಪೋಲೊ: ಕರ್ನಾಟಕಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 16:30 IST
Last Updated 19 ಜುಲೈ 2023, 16:30 IST

ಚೆನ್ನೈ: ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡವು ಇಲ್ಲಿ ನಡೆಯುತ್ತಿರುವ 49ನೇ ಜೂನಿಯರ್‌ ಅಕ್ವಟಿಕ್‌ ಚಾಂಪಿಯನ್‌ಷಿಪ್‌ನ ವಾಟರ್‌ ಪೋಲೊ ಸ್ಪರ್ಧೆಯಲ್ಲಿ ಬುಧವಾರ ನಿರಾಸೆ ಅನುಭವಿಸಿದವು.

ರಾಜ್ಯದ ಬಾಲಕರ ತಂಡವು ಬೆಂಗಾಲ್‌ ತಂಡದ ವಿರುದ್ಧ 3–18 ರಿಂದ ಸೋತಿತು. ಬೆಂಗಾಲ್‌ ತಂಡದ ಸೌಮೆನ್ ಮೊಂಡಲ್ (5), ಅರ್ಬಬ್‌ ಶಾ, ಪ್ರಿಮತ್‌ ದೇಬನಾಥ್ (ತಲಾ 3), ಪ್ರತಾಪ್‌ ದೇರ, ಸುಭೋದಿಪ್ ಹಾಲ್ಡರ್ (ತಲಾ 2), ಜಿಷ್ಣು, ಆರ್ಯನ್‌ ರೆಹಮಾನ್‌, ಸನ್‌ ಬಿಶ್ವಾಸ್‌ (ತಲಾ 1) ಗೋಲು ದಾಖಲಿಸಿದರೆ, ಕರ್ನಾಟಕ ತಂಡದ ಪರವಾಗಿ ಎಸ್‌.ಆರ್‌. ಚಾರುವರ್ಧನ್‌ (2), ನಿಹಾರ್‌ ರಾಜೇಶ್‌ (1) ಗೋಲು ಗಳಿಸಿಕೊಟ್ಟರು.

ರಾಜ್ಯದ ಬಾಲಕಿಯರ ತಂಡವು ಕೇರಳ ತಂಡಕ್ಕೆ 4–13ರಿಂದ ಮಣಿಯಿತು. ಕೇರಳ ತಂಡದ ಎಸ್‌.ವರ್ಷಾ (6), ಎಸ್‌.ಎಂ. ಮಧುರಿಮ (4), ಎಸ್‌.ವಂದನಾ (2), ಸಫಾ ಶಕೀರ್‌ (1) ಗೋಲು ಗಳಿಸಿದರೆ, ಕರ್ನಾಟಕದ ಪರವಾಗಿ ಪ್ರಚೇತಾ ಆರ್‌.ರಾವ್ (3), ರೋಷಿನಿ ಸರವಣನ್‌ (1) ಗೋಲು ದಾಖಲಿಸಿದರು.

ADVERTISEMENT

ಬಾಲಕರ ಇತರ ಪಂದ್ಯಗಳಲ್ಲಿ ಹರಿಯಾಣ ತಂಡವು ಪಂಜಾಬ್‌ ತಂಡವನ್ನು 9–7ರಿಂದ, ಮಹಾರಾಷ್ಟ್ರ ತಂಡವು ಕೇರಳ ತಂಡವನ್ನು 8–7ರಿಂದ, ಗುಜರಾತ್‌ ತಂಡವು ತೆಲಂಗಾಣ ತಂಡವನ್ನು 15–4ರಿಂದ ಮತ್ತು ಮಹಾರಾಷ್ಟ್ರ ತಂಡವು ತಮಿಳುನಾಡು ತಂಡವನ್ನು 14–2ರಿಂದ ಮಣಿಸಿತು.

ಬಾಲಕಿಯರ ಇತರ ಪಂದ್ಯಗಳಲ್ಲಿ ದೆಹಲಿ ತಂಡವು ತಮಿಳುನಾಡು ತಂಡವನ್ನು 14–5ರಿಂದ, ಮಹಾರಾಷ್ಟ್ರ ತಂಡವು ಬೆಂಗಾಲ್ ತಂಡವನ್ನು 6–5ರಿಂದ, ಹರಿಯಾಣ ತಂಡವು ತೆಲಂಗಾಣ ತಂಡವನ್ನು 8–4ರಿಂದ ಪರಾಭವಗೊಳಿಸಿತು.

‘ಎ’ ಗುಂಪಿನಲ್ಲಿರುವ ಬಾಲಕರ ತಂಡ ಎರಡನೇ ಸ್ಥಾನದಲ್ಲಿದ್ದರೆ, ಬೆಂಗಾಲ್ ತಂಡ ಅಗ್ರಸ್ಥಾನದಲ್ಲಿದೆ. ಬಾಲಕಿಯರ ತಂಡವೂ ‘ಎ’ ಗುಂಪಿನಲ್ಲಿದ್ದು, ಎರಡನೇ ಸ್ಥಾನದಲ್ಲಿದೆ. ಕೇರಳ ಮೊದಲ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.