ADVERTISEMENT

ಫುಟ್‌ಬಾಲ್‌: ನವೀ ಮುಂಬೈನಲ್ಲಿ ಫೈನಲ್‌ ಪಂದ್ಯ

17 ವರ್ಷದೊಳಗಿನ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ

ಪಿಟಿಐ
Published 18 ಫೆಬ್ರುವರಿ 2020, 20:00 IST
Last Updated 18 ಫೆಬ್ರುವರಿ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫಿಫಾ 17 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್‌ ಟೂರ್ನಿ ಫೈನಲ್‌ ಪಂದ್ಯ ನವೀ ಮುಂಬೈನಲ್ಲಿ ನಡೆಯಲಿದೆ. ನವೆಂಬರ್‌ 2ರಂದು ಟೂರ್ನಿ ಆರಂಭವಾಗಲಿದ್ದು ಅಂತಿಮ ಪಂದ್ಯ ನವೆಂಬರ್‌ 21ರಂದು ಆಯೋಜನೆಯಾಗಿದೆ. ಕೋಲ್ಕತ್ತ ಸೇರಿದಂತೆ ಐದು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ಟೂರ್ನಿಯ ಸಂಘಟನಾ ಸಮಿತಿ ಮಂಗಳವಾರ ಹೇಳಿದೆ.

16 ತಂಡಗಳು ಅಹ್ಮದಾಬಾದ್‌, ಭುವನೇಶ್ವರ, ಗುವಾಹಟಿ, ಕೋಲ್ಕತ್ತ ಮತ್ತು ನವೀ ಮುಂಬೈನಲ್ಲಿ ಆಡಲಿವೆ.

‘ಮತ್ತೊಂದು ಫುಟ್‌ಬಾಲ್‌ ವಿಶ್ವಕಪ್‌ ಆಯೋಜಿಸಲುಭಾರತ ಸಜ್ಜಾಗಿದೆ. ನಮ್ಮ 17 ವರ್ಷದೊಳಗಿನವರ ತಂಡ ಮೊದಲ ಬಾರಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿದೆ. ಇದು ಹೆಮ್ಮೆಯ ಸಂಗತಿಯಾಗಿದ್ದು, ಟೂರ್ನಿಯ ಯಶಸ್ಸಿಗೆ ಸಾಧ್ಯವಾದಷ್ಟು ಬೆಂಬಲ ನೀಡಲಾಗುವುದು’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.