ನವದೆಹಲಿ: ಏಷ್ಯನ್ ಗೇಮ್ಸ್ ಪದಕ ವಿಜೇತ ಅಭಯ್ ಸಿಂಗ್ ಅವರು ಟೊರೊಂಟೊದಲ್ಲಿ ನಡೆಯುತ್ತಿರುವ ಗುಡ್‌ಫೆಲೋ ಕ್ಲಾಸಿಕ್ ಸ್ಕ್ವಾಷ್ ಚಾಲೆಂಜರ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು.
ಅಗ್ರ ಶ್ರೇಯಾಂಕದ ಅಭಯ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ 13-11, 11-7, 11-3 ರಿಂದ ಫ್ರೆಂಚ್‌ನ ಮ್ಯಾಸಿಯೊ ಲೆವಿಯನ್ನು ಹಿಮ್ಮೆಟ್ಟಿಸಿದರು. ಈ ಮೂಲಕ ಎರಡು ತಿಂಗಳ ಅಂತರದಲ್ಲಿ ಎರಡನೇ ಪಿಎಸ್‌ಎ ಚಾಲೆಂಜರ್ ಟೂರ್ ಪ್ರಶಸ್ತಿ ಜಯಿಸುವ ಭರವಸೆ ಮೂಡಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 66ನೇ ಸ್ಥಾನದಲ್ಲಿರುವ ಅಭಯ್, ಕಳೆದ ತಿಂಗಳು ಮುಂಬೈನಲ್ಲಿ ನಡೆದ ಜೆಎಸ್‌ಡಬ್ಲ್ಯು ವಿಲ್ಲಿಂಗ್ಡನ್ ಪಿಎಸ್‌ಎ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.
ಹಾಂಗ್‌ಝೌ ಏಷ್ಯನ್ ಕ್ರೀಡಾಕೂಟದ ಸಿಂಗಲ್ಸ್‌ನಲ್ಲಿ ಚಿನ್ನ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ 25 ವರ್ಷದ ಆಟಗಾರ ಮುಂದಿನ ಸುತ್ತಿನಲ್ಲಿ ಈಜಿಪ್ಟ್‌ನ ಅಬ್ದೆಲ್‌ರಹ್ಮಾನ್ ಅಬ್ದೆಲ್‌ಖಲೆಕ್ ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.