ADVERTISEMENT

ಕೋವಿಡ್‌ ಸಂತ್ರಸ್ತರಿಗಾಗಿ ನಿಧಿ; ವರ್ಚುವಲ್‌ ಮ್ಯಾರಥಾನ್‌ನಲ್ಲಿ ಬಿಂದ್ರಾ ಭಾಗಿ

ಕೋವಿಡ್‌–19 ಸಂತ್ರಸ್ತರಿಗಾಗಿ ನಿಧಿ ಸಂಗ್ರಹ ಉದ್ದೇಶ

ಪಿಟಿಐ
Published 7 ಆಗಸ್ಟ್ 2020, 11:53 IST
Last Updated 7 ಆಗಸ್ಟ್ 2020, 11:53 IST
ಅಭಿನವ್‌ ಬಿಂದ್ರಾ
ಅಭಿನವ್‌ ಬಿಂದ್ರಾ   

ನವದೆಹಲಿ: ಬೀಜಿಂಗ್‌ ಒಲಿಂಪಿಕ್ಸ್‌‌ ಚಿನ್ನದ ಪದಕ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ ಅವರು ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನಿಧಿ ಸಂಗ್ರಹ ಸಹಾಯಾರ್ಥ ‘ಸನ್‌ಫೀಸ್ಟ್‌ ಇಂಡಿಯಾ ರನ್‌ ಆ್ಯಸ್‌ ಒನ್‌‘ ಎಂಬ ವರ್ಚುವಲ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ.

ಪ್ರತಿ ಸ್ಪರ್ಧಿಯಿಂದ ಸಂಗ್ರಹಿಸಿದ ನೋಂದಣಿ ಶುಲ್ಕವನ್ನು ಸಹಾಯ ನಿಧಿಯಾಗಿ ಬಳಸಲಾಗುತ್ತದೆ.

ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿರುವ ಸಮಾಜದ ದುರ್ಬಲ ವರ್ಗದವರಿಗೆ ನೆರವಾಗುವುದು ಈ ವರ್ಚುವಲ್‌ ರನ್‌ನ ಉದ್ದೇಶ.

ADVERTISEMENT

‘ನಮ್ಮಲ್ಲಿ ಕೆಲವರು ಫೋನ್‌ ಅಥವಾ ಲ್ಯಾಪ್‌ಟಾಪ್‌ನಂತಹ ಪರಿಕರಗಳನ್ನು ಹೊಂದಿದ್ದೇವೆ ಮತ್ತು ಮನೆಯಲ್ಲೇ ಕುಳಿತುಕೊಳ್ಳುವ ಅದೃಷ್ಟ ಪಡೆದಿದ್ದೇವೆ. ದೇಶದಾದ್ಯಂತ ಹಲವು ಜನರಿಗೆ ಈ ಅವಕಾಶ ಇಲ್ಲ. ಈ ವರ್ಚುವಲ್‌ ಮ್ಯಾರಥಾನ್‌ ಮೂಲಕ ನಾವು, ಜೀವನೋಪಾಯ ಕಳೆದುಕೊಂಡವರ ಹಾಗೂ ಕಳೆದುಕೊಳ್ಳುವ ಭೀತಿಯಲ್ಲಿರುವವರ ಬೆಂಬಲಕ್ಕೆ ನಿಲ್ಲುವ ಅವಕಾಶ ಲಭಿಸಿದೆ‘ ಎಂದು ಬಿಂದ್ರಾ ಹೇಳಿದ್ದಾರೆ.

ಮ್ಯಾರಥಾನ್‌ಗಾಗಿ ಈಗಾಗಲೇ ನೋಂದಣಿ ಆರಂಭವಾಗಿದೆ. ಪ್ರತಿಯೊಬ್ಬರು ₹ 99 ನೋಂದಣಿ ಶುಲ್ಕವನ್ನು ಪಾವತಿಸಬೇಕು. ಈ ಶುಲ್ಕ ಹೊರತುಪಡಿಸಿಯೂ ಹಣಕಾಸಿನ ನೆರವು ನೀಡಬಹುದು.

ಸರ್ಕಾರದ ‘ಫಿಟ್‌ ಇಂಡಿಯಾ‘ ಆಂದೋಲನವು ಈ ವರ್ಚುವಲ್‌ ಓಟಕ್ಕೆ ಬೆಂಬಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.