ADVERTISEMENT

ಶೂಟಿಂಗ್‌: ಮನು, ಆದರ್ಶ್‌ ಮುನ್ನಡೆ

ಪಿಟಿಐ
Published 13 ಮೇ 2024, 16:39 IST
Last Updated 13 ಮೇ 2024, 16:39 IST
ಮನು ಭಾಕರ್
ಮನು ಭಾಕರ್   

ಭೋಪಾಲ್‌: ಒಲಿಂಪಿಯನ್‌ ಶೂಟರ್‌ ಮನು ಭಾಕರ್ ಮತ್ತು ಆದರ್ಶ್ ಸಿಂಗ್ ಅವರು ಸೋಮವಾರ ಒಲಿಂಪಿಕ್ ಆಯ್ಕೆ ಟ್ರಯಲ್ಸ್‌ನಲ್ಲಿ ಕ್ರಮವಾಗಿ ಮಹಿಳೆಯರ 25 ಮೀ ಪಿಸ್ತೂಲ್ ಮತ್ತು ಪುರುಷರ 25 ಮೀ ರ‍್ಯಾಪಿಡ್ ಫೈರ್ ಪಿಸ್ತೂಲ್‌ನ ಅರ್ಹತಾ ಸುತ್ತಿನಲ್ಲಿ ಮುನ್ನಡೆ ಸಾಧಿಸಿದರು.

ಮಧ್ಯಪ್ರದೇಶದ ರಾಜ್ಯ ಶೂಟಿಂಗ್ ಅಕಾಡೆಮಿ ರೇಂಜ್‌ನಲ್ಲಿ ನಡೆಯುತ್ತಿರುವ ಟ್ರಯಲ್ಸ್‌ನಲ್ಲಿ ಮಂಗಳವಾರ ಪುರುಷ ಮತ್ತು ಮಹಿಳಾ ವಿಭಾಗಗಳ ಫೈನಲ್‌ ಸ್ಪರ್ಧೆ ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ ಅಗ್ರ ಐದು ಸ್ಥಾನಗಳನ್ನು ಪಡೆದ ಶೂಟರ್‌ಗಳು ಪೈಪೋಟಿ ನಡೆಸುವರು.

ಪುರುಷರ ವಿಭಾಗದಲ್ಲಿ ಅನೀಶ್‌ ಭಾನ್ವಾಲ ಮತ್ತು ಅಂಕುರ್ ಗೋಯೆಲ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ವಿಜಯವೀರ್ ಸಿಧು ಮತ್ತು ಭಾವೇಶ್ ಶೇಖಾವತ್ ನಂತರದ ಸ್ಥಾನಗಳನ್ನು ಪಡೆದು ಫೈನಲ್‌ಗೆ ಮುನ್ನಡೆದರು.

ADVERTISEMENT

ಮಹಿಳೆಯರ ವಿಭಾಗದಲ್ಲಿ ಇಶಾ ಸಿಂಗ್ ಎರಡನೇ ಸ್ಥಾನ ಪಡೆದರೆ, ರಿದಮ್ ಸಾಂಗ್ವಾನ್ ಮೂರನೇ ಸ್ಥಾನ ಗಳಿಸಿದರು. ಅಭಿದ್ನ್ಯಾ ಪಾಟೀಲ (582) ಮತ್ತು ಸಿಮ್ರನ್ ಪ್ರೀತ್ ಕೌರ್ ಬ್ರಾರ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.

ಟ್ರಯಲ್ಸ್ ನಂತರ ಆಯ್ಕೆ ಸಮಿತಿಯು ಸಭೆ ನಡೆಸಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅಂತಿಮ ತಂಡವನ್ನು ಘೋಷಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.