ನವದೆಹಲಿ: ಭಾರತದ ಅನುಭವಿ ಆಟಗಾರ ಪಂಕಜ್ ಅಡ್ವಾಣಿ ಅವರು ದೋಹಾದಲ್ಲಿ ಶನಿವಾರ ಮುಕ್ತಾಯಗೊಂಡ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಸತತ ಏಳನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅವರಿಗೆ ಒಟ್ಟಾರೆ ಇದು ದಾಖಲೆಯ 28ನೇ ವಿಶ್ವ ಪ್ರಶಸ್ತಿಯಾಗಿದೆ.
39 ವರ್ಷ ವಯಸ್ಸಿನ ತಾರೆ ಪಂಕಜ್ ಫೈನಲ್ನಲ್ಲಿ 4–2ರಿಂದ ಇಂಗ್ಲೆಂಡ್ನ ರಾಬರ್ಟ್ ಹಾಲ್ ಅವರನ್ನು ಮಣಿಸಿದರು. ಸಿಂಗಪುರದ ಪೀಟರ್ ಗಿಲ್ಕ್ರಿಸ್ಟ್ ಮತ್ತು ಭಾರತದ ಸೌರವ್ ಕೊಟ್ಟಾರಿ ಅವರು ಜಂಟಿ ಕಂಚಿನ ಪದಕ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.