ನವದೆಹಲಿ: ಭಾರತದ ಪಂಕಜ್ ಅಡ್ವಾಣಿ ಅವರು ಟರ್ಕಿಯ ಅಂತಾಲ್ಯದಲ್ಲಿ ನಡೆಯುತ್ತಿರುವ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನ ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ನಾಕೌಟ್ ಹಂತ ಪ್ರವೇಶಿಸಿದರು.
ಗುಂಪು ಹಂತದ ಮೊದಲ ಪಂದ್ಯದಲ್ಲಿ ಪಂಕಜ್, 3–0 ರಲ್ಲಿ (62-2, 117-8, 75-15) ಸ್ಥಳೀಯ ಆಟಗಾರ ಅಬ್ದುರಹ್ಮಾನ್ ಯಿಲ್ಮಾಜ್ ಅವರನ್ನು ಮಣಿಸಿ ಶುಭಾರಂಭ ಮಾಡಿದರು.
ಎರಡನೇ ಪಂದ್ಯದಲ್ಲಿ 3-0 ರಲ್ಲಿ (57-23, 80-34, 61-22) ಈಜಿಪ್ಟ್‌ನ ಅಹ್ಮದ್ ಸಮೀರ್ ವಿರುದ್ಧ ಗೆದ್ದರೆ, ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಮಾರ್ಕೊ ರೀಜೆರ್ಸ್ ಅವರನ್ನು 57-23, 80-34, 61-22 ರಲ್ಲಿ ನೇರ ಫ್ರೇಮ್‌ಗಳಿಂದ ಮಣಿಸಿದರು.
ನಾಕೌಟ್ ಹಂತದ ಪಂದ್ಯಗಳು ಬುಧವಾರದಿಂದ ನಡೆಯಲಿವೆ. ಅಡ್ವಾಣಿ ಅವರು ಕಳೆದ ತಿಂಗಳು ಕ್ವಾಲಾಲಂಪುರದಲ್ಲಿ ನಡೆದಿದ್ದ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ಗೆದ್ದು, ವೃತ್ತಿಜೀವನದ 25ನೇ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.