ADVERTISEMENT

ಏಷ್ಯನ್ ಬಿಲಿಯರ್ಡ್ಸ್‌: ಹ್ಯಾಟ್ರಿಕ್‌ ಪ್ರಶಸ್ತಿಯತ್ತ ಪಂಕಜ್‌

ಪಿಟಿಐ
Published 5 ಜುಲೈ 2024, 14:23 IST
Last Updated 5 ಜುಲೈ 2024, 14:23 IST
ಪಂಕಜ್‌ ಅಡ್ವಾಣಿ –ಪ್ರಜಾವಾಣಿ ಚಿತ್ರ
ಪಂಕಜ್‌ ಅಡ್ವಾಣಿ –ಪ್ರಜಾವಾಣಿ ಚಿತ್ರ   

ರಿಯಾದ್‌: ಭಾರತದ ಪಂಕಜ್‌ ಅಡ್ವಾಣಿ ಅವರು ಏಷ್ಯನ್ ಬಿಲಿಯರ್ಡ್ಸ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸಾಧನೆಗೆ ಒಂದು ಹೆಜ್ಜೆ ಮಾತ್ರ ದೂರವಿದ್ದಾರೆ. ಅಡ್ವಾಣಿ ಅವರು 5–0ರ ಅಂತರದಿಂದ ಸ್ವದೇಶದ ಸೌರವ್‌ ಕೊಠಾರಿ ವಿರುದ್ಧ ಗೆಲ್ಲುವ ಮೂಲಕ ಫೈನಲ್‌ ತಲುಪಿದ್ದಾರೆ.

ಇದಕ್ಕೂ ಮುನ್ನ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಪಂಕಜ್‌ ಅಡ್ವಾಣಿ, ಭಾರತದ ಮತ್ತೊಬ್ಬ ಆಟಗಾರ ಶ್ರೀಕೃಷ್ಣ ಸೂರ್ಯನಾರಾಯಣನ್‌ ವಿರುದ್ಧ 5–0 ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT