ADVERTISEMENT

ಜೂನಿಯರ್ ಕುಸ್ತಿ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 18:18 IST
Last Updated 7 ಫೆಬ್ರುವರಿ 2024, 18:18 IST
   

ನವದೆಹಲಿ (ಪಿಟಿಐ): ಗ್ವಾಲಿಯರ್‌ನಲ್ಲಿ ನಡೆಯಲಿದ್ದ 15 ಮತ್ತು 20 ವರ್ಷದೊಳಗಿನವರ ವಿಭಾಗಗಳ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ ಮುಂದೂಡಲಾಗಿದೆ. ಈ ಟೂರ್ನಿಯನ್ನು ಭಾರತ ಕುಸ್ತಿ ಫೆಡರೇಷನ್ ಅಡ್‌ಹಾಕ್ ಸಮಿತಿಯು ಆಯೋಜಿಸಿತ್ತು.

ಫೆಬ್ರುವರಿ 11 ರಿಂದ 17ರವರೆಗೆ ಚಾಂಪಿಯನ್‌ಷಿಪ್ ಆಯೋಜಿಸಲಾಗಿತ್ತು. 20 ಮತ್ತು 15 ವರ್ಷದೊಳಗಿನ ವಯೋಮಿತಿಗಳಲ್ಲಿ ಫ್ರೀಸ್ಟೈಲ್, ಗ್ರಿಕೊ ರೋಮನ್  ಶೈಲಿ ಸ್ಪರ್ಧೆಗಳಿದ್ದವು. ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್ ಕೂಡ ನಡೆಯುವುದಿತ್ತು.

‘ಟೂರ್ನಿಯನ್ನು ಈಗ ಆಯೋಜಿಸಿರುವುದರಿಂದ  ತಮ್ಮ ಕುಸ್ತಿಪಟುಗಳಿಗೆ ಅಭ್ಯಾಸ ನಡೆಸಲು ಹೆಚ್ಚಿನ ಅವಧಿ ಸಿಕ್ಕಿಲ್ಲ. ಇದರಿಂದಾಗಿ ತೊಂದರೆಯಾಗುತ್ತದೆ ಎಂದು ಕೆಲವು ರಾಜ್ಯ ಕುಸ್ತಿ ಸಂಸ್ಥೆಗಳು ಹೇಳಿದ್ದವು. ಆದ್ದರಿಂದ ಮುಂದೂಡಲಾಗಿದೆ’ ಎಂದು ಅಡ್‌ಹಾಕ್ ಸಮಿತಿ ಮುಖ್ಯಸ್ಥ ಭೂಪಿಂದರ್ ಸಿಂಗ್ ಬಜ್ವಾ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.