ADVERTISEMENT

ಎಐಎಫ್‌ಎಫ್‌ಗೆ ₹14 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 16:15 IST
Last Updated 29 ಆಗಸ್ಟ್ 2022, 16:15 IST

ನವದೆಹಲಿ: ಏಷ್ಯಾ ಕಪ್‌ ಅರ್ಹತಾ ಪಂದ್ಯದ ವೇಳೆ ಪ್ರೇಕ್ಷಕರು ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ), ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ಗೆ ಒಟ್ಟು ₹ 14 ಲಕ್ಷ ದಂಡ ವಿಧಿಸಿದೆ.

ಇದರಲ್ಲಿ ₹ 10.79 ಲಕ್ಷ ಮೊತ್ತವನ್ನು ಇದೇ ತಪ್ಪು ಮುಂದಿನ ಎರಡು ವರ್ಷಗಳಲ್ಲಿ ಪುನರಾವರ್ತನೆಯಾದರೆ ಮಾತ್ರ ತೆರಬೇಕು ಎದು ಎಎಫ್‌ಸಿ ಶಿಸ್ತು ಸಮಿತಿಯ ಪ್ರಕಟಣೆ ತಿಳಿಸಿದೆ.

ಜೂನ್‌ನಲ್ಲಿ ಕೋಲ್ಕತ್ತದಲ್ಲಿ ನಡೆದ ಅಫ್ಗಾನಿಸ್ತಾನ ಮತ್ತು ಹಾಂಗ್‌ಕಾಂಗ್‌ ಎದುರಿನ ಪಂದ್ಯದ ವೇಳೆ ಭಾರತದ ಪ್ರೇಕ್ಷಕರು ಅಂಗಳದಲ್ಲಿ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದರು. ಈ ಘಟನೆಯನ್ನು ಎಎಫ್‌ಸಿ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ತೆಗೆದುಕೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.