ADVERTISEMENT

ಕಂಚಿನ ಪದಕದಿಂದ ಈಗ ಚಿನ್ನದ ಗುರಿ: ಹರ್ಮನ್‌ಪ್ರೀತ್‌

ಪಿಟಿಐ
Published 7 ಮಾರ್ಚ್ 2024, 16:31 IST
Last Updated 7 ಮಾರ್ಚ್ 2024, 16:31 IST
<div class="paragraphs"><p>ಹರ್ಮನ್‌ಪ್ರೀತ್‌ ಸಿಂಗ್</p></div>

ಹರ್ಮನ್‌ಪ್ರೀತ್‌ ಸಿಂಗ್

   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತ ಪುರುಷರ ಹಾಕಿ ತಂಡ, ಮುಂಬರುವ ಪ್ಯಾರಿಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಿದೆ ಎಂದು ನಾಯಕ ಹರ್ಮನ್‌ಪ್ರೀತ್‌ ಸಿಂಗ್ ಹೇಳಿದ್ದಾರೆ.

ದಾಖಲೆಯ ಎಂಟು ಬಾರಿ ಚಿನ್ನದ ಪದಕ ವಿಜೇತ ಭಾರತ ತಂಡ, 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜರ್ಮನಿಯನ್ನು 5-4 ಅಂತರದಿಂದ ಸೋಲಿಸಿ ಕಂಚಿನ ಪದಕ ಪಡೆದಿತ್ತು. ಒಲಿಂಪಿಕ್ ಪದಕಕ್ಕಾಗಿ 41 ವರ್ಷ ಕಾಯುವಿಕೆಯನ್ನು ಕೊನೆಗೊಳಿಸಿತು.

ADVERTISEMENT

ಇದಕ್ಕೂ ಮುನ್ನ 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತ ಕೊನೆ ಬಾರಿ ಚಿನ್ನದ ಪದಕ ಪಡೆದಿತ್ತು.

‘ಟೋಕಿಯೊ ಒಲಿಂಪಿಕ್ಸ್ ಒಂದು ಸ್ಮರಣೀಯ ಕ್ಷಣವಾಗಿತ್ತು. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದೇವೆ. ನಮ್ಮ ಆರಂಭಿಕ ಗಮನವು ಗುಂಪು ಹಂತ ದಾಟಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಇದೆ. ನಮ್ಮ ಅನುಭವ ಮತ್ತು ಕೌಶಲದೊಂದಿಗೆ, ನಾವು ಪೋಡಿಯಂ ಫಿನಿಶ್‌ಗೆ ಪ್ರಬಲ ಸ್ಪರ್ಧಿಗಳು ಎಂಬ ನಂಬಿಕೆಯಿದೆ’ ಎಂದು ಹರ್ಮನ್‌ಪ್ರೀತ್‌ ಅವರು  ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಒಲಿಂಪಿಕ್ಸ್‌ನಲ್ಲಿ ಪ್ರತಿಯೊಂದು ಸವಾಲನ್ನು ಎದುರಿಸಲು ನಾವು ದೃಢವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಾಗಿದ್ದೇವೆ. ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮೂಲಕ, ಯಾವುದೇ ತಂಡವನ್ನು ಸೋಲಿಸಬಹುದು' ಎಂದರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ  4ನೇ ಸ್ಥಾನದಲ್ಲಿರುವ ಭಾರತ ತಂಡ ಜುಲೈ 27ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಜುಲೈ 29ರಂದು ಅರ್ಜೆಂಟೀನಾ, ಜುಲೈ 30ರಂದು 12ನೇ ಶ್ರೇಯಾಂಕದ ಐರ್ಲೆಂಡ್ ಹಾಗೂ ಆಗಸ್ಟ್ 1ರಂದು 2ನೇ ಸ್ಥಾನದಲ್ಲಿರುವ ಬೆಲ್ಜಿಯಂ ವಿರುದ್ಧ ಸೆಣಸಲಿದೆ. ಆಗಸ್ಟ್ 2 ರಂದು ಆಸ್ಟ್ರೇಲಿಯಾ ವಿರುದ್ಧ ಗುಂಪು ಹಂತದ ಕೊನೆಯ ಪಂದ್ಯ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.