ADVERTISEMENT

ಆಲ್‌ ಅಟ್ರ್ಯಾಕ್ಶನ್‌ಗೆ ಕೆ.ಎನ್‌. ಗುರುಸ್ವಾಮಿ ಮೆಮೋರಿಯಲ್‌ ಕಪ್‌

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 19:54 IST
Last Updated 5 ಜೂನ್ 2022, 19:54 IST
ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಭಾನುವಾರ ನಡೆದ ರೇಸ್‌ನಲ್ಲಿ ಕೆ.ಎನ್‌. ಗುರುಸ್ವಾಮಿ ಮೆಮೋರಿಯಲ್ ಕಪ್‌ ಜಯಿಸಿದ ಆಲ್‌ ಅಟ್ರ್ಯಾಕ್ಷನ್ ಕುದುರೆಯ ತರಬೇತುದಾರ ವಿ. ಲೋಕನಾಥ್ ಅವರಿಗೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ತಿಲಕ್‌ ಕುಮಾರ್ ಅವರು ಟ್ರೋಫಿ ಪ್ರದಾನ ಮಾಡಿದರು. ಬಿಟಿಸಿ ವ್ಯವಸ್ಥಾಪಕ ಸಮಿತಿ ಸದಸ್ಯ ಅರವಿಂದ್ ರಾಘವನ್‌ ಮತ್ತು ಚೇರ್ಮನ್‌ ಕೆ. ಉದಯ್ ಈಶ್ವರನ್ ಇದ್ದಾರೆ – ಪ್ರಜಾವಾಣಿ ಚಿತ್ರ

ಬೆಂಗಳೂರು: ಆಲ್‌ ಅಟ್ರ್ಯಾಕ್ಶನ್‌ ಭಾನುವಾರ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ (ಬಿಟಿಸಿ)ಆಯೋಜಿಸಿದ್ದ ಕೆ.ಎನ್‌.ಗುರುಸ್ವಾಮಿ ಮೆಮೋರಿಯಲ್‌ ಕಪ್‌ ರೇಸ್‌ನಲ್ಲಿ ಜಯಗಳಿಸಿದೆ.

ವಿ.ಲೋಕನಾಥ್‌ ಅವರ ತರಬೇತಿನಲ್ಲಿ ‍ಪಳಗಿದ್ದ ಆಲ್ ಅಟ್ರ್ಯಾಕ್ಶನ್ ಅಶ್ವವನ್ನು ಅಕ್ಷಯ್‌ ಕುಮಾರ್‌ ಸವಾರಿ ಮಾಡಿದರು.ಈ ರೇಸ್‌ ಗೆಲ್ಲಲು ಆಲ್‌ ಅಟ್ರ್ಯಾಕ್ಶನ್‌ 1:41.48 ನಿಮಿಷಗಳನ್ನು ತೆಗೆದುಕೊಂಡಿತು.

ಸ್ಯಾಡ್ಲರ್ಸ್‌ ಗ್ಲೋರಿ ಈ ರೇಸ್‌ನಲ್ಲಿ 16/10 ಫೇವರಿಟ್‌ ಆಗಿದ್ದರೆ, ಆಲ್‌ ಅಟ್ರ್ಯಾಕ್ಶನ್‌ 3/1 ಎರಡನೇ ಫೇವರಿಟ್‌ ಆಗಿತ್ತು. ರೇಸ್‌ ಪ್ರಾರಂಭದಿಂದಲೂ ನಾಲ್ಕನೇ ಸ್ಥಾನದಲ್ಲಿ ಓಡುತ್ತಿದ್ದ ಆಲ್‌ ಅಟ್ರ್ಯಾಕ್ಶನ್‌ ಕೊನೆಯ 300 ಮೀಟರ್ಸ್‌ನಲ್ಲಿ ವೇಗವಾಗಿ ಮುನ್ನುಗ್ಗಿ ಮುನ್ನಡೆ ಪಡೆದು 3 ½ ಲೆಂತ್‌ ಅಂತರದ ಸುಲಭ ಜಯಗಳಿಸಿತು. ಪ್ರೇಗ್‌ ಎರಡನೇ ಸ್ಥಾನವನ್ನು ಪಡೆದರೆ, ಫೇವರಿಟ್‌ ಸ್ಯಾಡ್ಲರ್ಸ್‌ ಗ್ಲೋರಿ ಮೂರನೇ ಸ್ಥಾನ ಗಳಿಸಿತು. ಟ್ವಿಲೈಟ್‌ ಅಜೆಂಡ ನಾಲ್ಕನೇ ಸ್ಥಾನ ಪಡೆಯಿತು.

ADVERTISEMENT

ದಿನದ ಪ್ರಧಾನ ರೇಸ್‌ ಡಿ.ಟಿ ರೇಸಿಂಗ್‌ ಅಂಡ್‌ ಬ್ರೀಡಿಂಗ್‌ ಎಲ್‌ಎಲ್‌ಪಿ ಜುವೆನೈಲ್‌ ಮಿಲಿಯನ್‌ನಲ್ಲಿ ಲಾಸ್ಟ್‌ ವಿಶ್‌ ಅನಿರೀಕ್ಷಿತ ಫಲಿತಾಂಶ ನೀಡಿದೆ. 8/1 ಕ್ಕಿಂತಲೂ ಹೆಚ್ಚಿನ ಬೇಡಿಕೆಯಲ್ಲಿದ್ದ ಲಾಸ್ಟ್‌ ವಿಶ್‌ 1/1 ಫೇವರಿಟ್‌ ಆಗಿದ್ದ ಸೂಪರ್‌ನ್ಯಾಚುರಲ್‌ಅನ್ನು ¾ ಲೆಂತ್‌ಗಳ ನೇರ ಅಂತರದಿಂದ ಹಿಂದಿಕ್ಕಿ ಜಯಗಳಿಸಿತು. ಮೊಜಿಟೊ ಮತ್ತು ಕಿಂಗ್‌ ಲೂಯಿಸ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದವು.

ದಿನದ ಏಳು ರೇಸ್‌ಗಳಲ್ಲಿ ಎಲ್ಲಾ ಏಳು ಫೇವರಿಟ್‌ ಕುದುರೆಗಳು ವೈಫಲ್ಯ ಅನುಭವಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.