ಉಪ್ಪಿನಂಗಡಿ (ದಕ್ಷಿಣ ಕನ್ನಡ): ಕರ್ನಾಟಕದ ವಿಶ್ವವಿದ್ಯಾಲಯಗಳು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆರಂಭಗೊಂಡ ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿವೆ.
ಬೆಳಿಗ್ಗೆ ನಡೆದ ನಾಕೌಟ್ ಪಂದ್ಯಗಳಲ್ಲಿ ಬೆಂಗಳೂರು ವಿವಿ 35-07, 35-14ರಲ್ಲಿ ಮೌಲಾನಾ ಆಜಾದ್ ವಿವಿಯನ್ನು ಮಣಿಸಿತು. ಬೆಳಗಾವಿಯ ವಿಶ್ವೇಶ್ವರಯ್ಯ ವಿವಿ 32-35, 35-29, 35-27ರಲ್ಲಿ ಕುವೆಂಪು ವಿವಿ ವಿರುದ್ಧ ಜಯ ಗಳಿಸಿತು. ಹೈದರಾಬಾದ್‌ನ ಜೆಎನ್‌ಟಿಯು ವಿವಿಯನ್ನು ಮೈಸೂರು ವಿವಿ 35-32, 35-24ರಲ್ಲಿ ಸೋಲಿಸಿತು. ಮಧ್ಯಾಹ್ನದ ನಂತರ ನಡೆದ ಪಂದ್ಯದಲ್ಲಿ ಬೆಂಗಳೂರು ನಗರ ವಿವಿಯನ್ನು ವಿಶ್ವೇಶ್ವರಯ್ಯ ವಿವಿ 35-31, 35-22ರಲ್ಲಿ ಮಣಿಸಿತು. ಬೆಳಿಗ್ಗೆ 35-28, 35-31ರಲ್ಲಿ ರವಿಶಂಕರ್ ಶುಕ್ಲಾ ವಿವಿಯನ್ನು ಮಣಿಸಿದ ದಾವಣಗೆರೆ ವಿವಿ ಸಂಜೆ ಕೆಎಸ್‌ಎನ್‌ಯುಎಎಚ್‌ಎಸ್ ಎದುರಿನ ಪಂದ್ಯದಲ್ಲಿ 28–35, 35–20, 31–35ರಲ್ಲಿ ಸೋತಿತು.
ಇತರ ಪಂದ್ಯಗಳ ಫಲಿತಾಂಶಗಳು: ರಾಜಸ್ಥಾನದ ಜೆಆರ್‌ಎನ್‌ಗೆ ವಿಕ್ರಮ ಸಿಂಹಪುರಿ ವಿರುದ್ಧ 35-11, 35-10ರಲ್ಲಿ, ಟಿ.ಎಂ ಬಗಲ್‌ಪುರ್‌ಗೆ ಒಸ್ಮಾನಿಯಾ ವಿವಿ ವಿರುದ್ಧ 35-28, 35-22ರಲ್ಲಿ, ಎಸ್‌ವಿ ವಿವಿಗೆ ಅನಂತಪುರದ ಜೆಎನ್‌ಟಿಯುವಿರುದ್ಧ 35-12, 35-21ರಲ್ಲಿ, ಕಾಕಿನಾಡದ ಜೆಎನ್‌ಟಿಯುಗೆ ಶ್ರೀ ಕುಶಾಲ್‌ದಾಸ್ ವಿವಿ ವಿರುದ್ಧ 35-11, 35-10ರಲ್ಲಿ, ಉತ್ಕಲ್ ವಿವಿಗೆ ಹೇಮಚಂದ್ರ ವಿವಿ ವಿರುದ್ಧ 35-21, 35-22ರಲ್ಲಿ, ಮುಂಬೈ ವಿವಿಗೆ ರಾಣಿ ಚನ್ನಮ್ಮ ವಿವಿ ವಿರುದ್ಧ 35-28, 35-29ರಲ್ಲಿ, ಆರ್‌ಟಿಎಂ ವಿವಿಗೆ ಬೆಹ್ರಾಂಪುರ್ ವಿವಿ ವಿರುದ್ಧ 38-36, 35-22ರಲ್ಲಿ, ಕೇರಳ ವಿವಿಗೆ ಡಾ.ವೈಎಸ್ಆರ್ ವಿವಿ ವಿರುದ್ಧ 35-13, 35-18ರಲ್ಲಿ ಗೆಲುವು.
ಆಚಾರ್ಯ ನಾಗಾರ್ಜುನ ವಿವಿಗೆ ಅಟಲ್ ಬಿಹಾರಿ ವಿವಿ ವಿರುದ್ಧ 35-19, 35-22ರಲ್ಲಿ, ಭಾರತಿದಾಸನ್ ವಿವಿಗೆ ಭರ್ಕತ್ ಉಲ್ಲಾ ವಿವಿ ವಿರುದ್ಧ 35-19, 35-14ರಲ್ಲಿ, ಕೃಷ್ಣ ವಿವಿಗೆ ಪುದುಚೇರಿ ವಿವಿ ವಿರುದ್ಧ 35-21, 35-30ರಲ್ಲಿ, ಕ್ಯಾಲಿಕಟ್ ವಿವಿಗೆ ಬೆಂಗಳೂರು ಉತ್ತರ ವಿವಿ ವಿರುದ್ಧ 35-15, 35-21ರಲ್ಲಿ, ಪೆರಿಯಾರ್ ವಿವಿಗೆ ಕರ್ನಾಟಕ ವಿವಿ ವಿರುದ್ಧ 35-16, 35-21ರಲ್ಲಿ ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.