ADVERTISEMENT

ಸೆಮಿಫೈನಲ್‌ಗೆ ಅಮಿತ್‌, ಗೌರವ್‌

ಕೆಮಿಸ್ಟ್ರಿ ಬಾಕ್ಸಿಂಗ್‌ ಕಪ್‌ ಟೂರ್ನಿ: ಧೀರಜ್ ರಂಗಿ ಗೆಲುವಿನ ಓಟ

ಪಿಟಿಐ
Published 21 ಜೂನ್ 2018, 18:19 IST
Last Updated 21 ಜೂನ್ 2018, 18:19 IST
ಗೌರವ್‌ ಸೋಲಂಕಿ
ಗೌರವ್‌ ಸೋಲಂಕಿ   

ನವದೆಹಲಿ: ಭಾರತದ ಮೂರು ಬಾಕ್ಸರ್‌ಗಳು ಜರ್ಮನಿಯ ಹ್ಯಾಲೆಯಲ್ಲಿ ನಡೆಯುತ್ತಿರುವ ಕೆಮಿಸ್ಟ್ರಿ ಬಾಕ್ಸಿಂಗ್‌ ಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಗೆದ್ದಿದ್ದಾರೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ಜಯಿಸಿದ್ದ ಅಮಿತ್‌ ಪಂಗಲ್‌, ಗೌರವ್‌ ಸೋಲಂಕಿ ಮತ್ತು ಧೀರಜ್‌ ರಂಗಿ ಅವರು ಈ ಗೆಲುವಿನೊಂದಿಗೆ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಪುರುಷರ 49 ಕೆ. ಜಿ. ವಿಭಾಗದಲ್ಲಿ ಅಮಿತ್‌ ಅವರು ಜರ್ಮನಿಯ ಕ್ರಿಸ್ಟೋಫರ್‌ ಗೋಮನ್‌ ವಿರುದ್ಧ5–0ಯಿಂದ ಜಯಿಸಿದರು. ಸೆಮಿಫೈನಲ್‌ ಪಂದ್ಯದಲ್ಲಿ ಅವರು ಕ್ಯೂಬಾದ ಡೆಮಿಯನ್‌ ಆರ್ಕ್‌ ದುವಾರ್ಟೆ ಅವರನ್ನು ಎದುರಿಸಲಿದ್ದಾರೆ.

ADVERTISEMENT

52 ಕೆ.ಜಿ. ವಿಭಾಗದಲ್ಲಿ ಗೌರವ್‌ ಅವರು ರಷ್ಯಾದ ವಾದಿಮ್‌ ಕುದ್ರಿಯಾ ಕೋವ್‌ ಅವರನ್ನು ಮಣಿಸಿದರು. ಇವರು ತಮ್ಮ ಮುಂದಿನ ಪಂದ್ಯದಲ್ಲಿ ಐರ್ಲೆಂಡ್‌ನ ಕೊನೊರ್‌ ಕ್ವಿನ್ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

64 ಕೆ. ಜಿ. ವಿಭಾಗದಲ್ಲಿ ಧೀರಜ್‌ ರಂಗಿ ಅವರು ಸ್ಥಳೀಯ ವ್ಲಾದಿಸ್ಲಾವ್‌ ಬರಿಶ್ನಿಕ್‌ ಅವರನ್ನು ಸೋಲಿಸಿದರು. ಆದರೆ, ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಇನ್ನೊಬ್ಬ ಬಾಕ್ಸರ್‌ ವಿಕಾಸ್‌ ಕೃಷ್ಣನ್‌ ಅವರು ಪುರುಷರ 75ಕೆ. ಜಿ. ವಿಭಾಗದಲ್ಲಿ ಕ್ಯೂಬಾದ ಅರ್ಲೆನ್‌ ಲೊಪೆಜ್‌ ಅವರ ವಿರುದ್ಧ ಸೋತರು. ಇವರೊಂದಿಗೆ ಮನೀಶ್‌ ಕೌಶಿಕ್‌ (60 ಕೆ. ಜಿ. ವಿಭಾಗ), ನಮನ್‌ ತನ್ವರ್‌ (91 ಕೆ. ಜಿ. ವಿಭಾಗ), ಅಂಕುಶ್‌ ದಹಿಯಾ (60 ಕೆ. ಜಿ. ವಿಭಾಗ) ಅವರೂ ಪರಾಭವಗೊಂಡರು.

ಮನೀಶ್‌ ಅವರು ಕ್ಯೂಬಾದ ಲಜಾರೊ ಜಾರ್ಜ್‌ ಅಲ್ವರೆಜ್‌ ಎಸ್ತ್ರದಾ ವಿರುದ್ಧ ಹಾಗೂ ನಮನ್‌ ಅವರು ನೆದರ್ಲ್ಯಾಂಡ್‌ನ ರಾಯ್‌ ಕೊರ್ವಿಂಗ್‌ ವಿರುದ್ಧ ಮಣಿದರು. ಅಂಕುಶ್‌ ಅವರನ್ನು ರಷ್ಯಾದ ಅರ್ಥರ್‌ ಸುಬ್‌ಖಾನ್‌ಕುಲೋವ್‌ ಅವರು ಪರಾಭವಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.