ADVERTISEMENT

ಅಮಿತ್ ಪಂಘಾಲ್, ಶಿವ ಥಾಪಾಗೆ ಸ್ಥಾನ

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಪುರುಷರ ಬಾಕ್ಸಿಂಗ್ ತಂಡ ಆಯ್ಕೆ: ಸುಮಿತ್‌ ಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 11:26 IST
Last Updated 2 ಜೂನ್ 2022, 11:26 IST
ಶಿವ ಥಾಪಾ 
ಶಿವ ಥಾಪಾ    

ಪಟಿಯಾಲ (ಪಿಟಿಐ): ವಿಶ್ವ ಚಾಂಪಿಯನ್‌ಷಿಪ್ ಪದಕವಿಜೇತರಾದ ಅಮಿತ್ ಪಂಘಾಲ್ ಮತ್ತು ಶಿವ ಥಾಪಾ ಅವರನ್ನು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಭಾರತದ ಪುರುಷರ ಬಾಕ್ಸಿಂಗ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್ ಬೆಳ್ಳಿ ಮತ್ತು 2015ರ ಕಂಚಿನ ಪದಕವಿಜೇತ ಶಿವ ಕ್ರಮವಾಗಿ 51 ಕೆ.ಜಿ ಮತ್ತು 63 ಕೆ.ಜಿ ವಿಭಾಗಗಳಲ್ಲಿ ಸ್ಥಾನ ಪಡೆದಿದ್ದಾರೆ. ಥಾಪಾ ಇತ್ತೀಚೆಗೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ಅಥ್ಲೀಟ್ಸ್‌ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಆಯ್ಕೆ ಟ್ರಯಲ್ಸ್‌ ನಲ್ಲಿ ಅಮಿತ್ 4–1ರಿಂದ ಸರ್ವಿಸಸ್ ತಂಡದ ದೀಪಕ್ ವಿರುದ್ಧ ಜಯಿಸಿದರು. ತಾಪಾ 5–0ಯಿಂದ ಕಳೆದ ಸಲದ ಕಾಮನ್‌ವೆಲ್ತ್ ಕ್ರೀಡಾಕೂಟ ಪದಕವಿಜೇತ ಮನೀಷ್ ಕೌಶಿಕ್ ವಿರುದ್ಧ ಗೆದ್ದರು.

ADVERTISEMENT

ಹಾಲಿ ರಾಷ್ಟ್ರೀಯ ಚಾಂಪಿಯನ್ ಸುಮಿತ್ ಅವರಿಗೆ 75 ಕೆ.ಜಿ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಿಂದ ಆಗಸ್ಟ್ 8ರವರೆಗೆ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯಲಿದೆ. ಮಹಿಳೆಯರ ಬಾಕ್ಸಿಂಗ್ ತಂಡದ ಆಯ್ಕೆ ಟ್ರಯಲ್ಸ್ ಮುಂದಿನ ವಾರ ಆಯೋಜಿಸಲಾಗಿದೆ.

ಪುರುಷರ ತಂಡ: ಅಮಿತ್ ಪಂಘಾಲ್ (51ಕೆ.ಜಿ), ಮೊಹಮ್ಮದ್ ಹಸಮುದ್ದೀನ್ (57 ಕೆ.ಜಿ), ಶಿವ ಥಾಪಾ (63ಕೆ.ಜಿ), ರೋಹಿತ್ ಟೋಕಾಸ್ (67ಕೆ.ಜಿ), ಸುಮಿತ್ (75ಕೆಜಿ), ಆಶಿಶ್ ಕುಮಾರ್ (80 ಕೆ.ಜಿ), ಸಂಜೀತ್ (92 ಕೆ.ಜಿ), ಸಾಗರ್ (92ಕೆ.ಜಿ+)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.