ನವದೆಹಲಿ: ಭಾರತದ ಅನಾಹತ್ ಸಿಂಗ್ ಮತ್ತು ಶೌರ್ಯ ಬಾವಾ ಅವರು ವಿಶ್ವ ಜೂನಿಯರ್ ಸ್ಕ್ವ್ಯಾಷ್ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಬಾಲಕಿಯರ ವಿಭಾಗದ ಮೂರನೇ ಸುತ್ತಿನಲ್ಲಿ ಅನಾಹತ್ ಅವರು 11-7, 12-10, 11-6 ಅಮೆರಿಕದ ಸಮಂತಾ ಜಫ್ ಅವರನ್ನು ಸೋಲಿಸಿದರು. ಕ್ವಾರ್ಟರ್ ಫೈನಲ್ ಪ್ರವೇಶಕ್ಕಾಗಿ ಮುಂದಿನ ಸುತ್ತಿನಲ್ಲಿ ಜಪಾನ್‌ನ ಅಕರಿ ಮಿಡೋರಿಕಾವಾ ಅವರ ವಿರುದ್ಧ ಸೆಣಸಲಿದ್ದಾರೆ.
ಬಾಲಕರ ವಿಭಾಗದ ಮೂರನೇ ಸುತ್ತಿನಲ್ಲಿ ಶೌರ್ಯ ಬಾವಾ ಅವರು 4-11, 11-7, 12-10, 11-6ರಿಂದ ಅಮೆರಿಕದ ರಸ್ಟಿನ್ ಡೈಸರ್ ವಿರುದ್ಧ ಜಯ ಗಳಿಸಿದರು. ಮುಂದಿನ ಸುತ್ತಿನಲ್ಲಿ ಅರ್ಜೆಂಟೀನಾದ ಸೆಗುಂಡೊ ಪೊರ್ಟಾಬ್ಲೆಸ್ ಅವರನ್ನು ಎದುರಿಸಲಿದ್ದಾರೆ.
ಬಾಲಕರ 3ನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಭಾರತದ ಯುವರಾಜ್ ಮಾಧವಾಣಿ ಅವರು 11-8, 6-11, 11-7, 8-11, 6-11ರಿಂದ ಈಕ್ವೆಡಾರ್‌ನ ಎಮಿಲಿಯೊ ಲೋಪೆಜ್ ವಿರುದ್ಧ ಸೋಲನುಭವಿಸಿದರು.
ಬಾಲಕಿಯರ ವಿಭಾಗದಲ್ಲಿ ಟಿಯಾನಾ ಪಾರಸ್‌ರಾಮ್‌ಪುರಿ ಅವರು 5-11, 3-11, 3-11ರಿಂದ ಫ್ರಾನ್ಸ್‌ನ ಲೌರೆನ್ ಬಾಲ್ಟಾಯನ್ ವಿರುದ್ಧ ಸೋತು ನಾಲ್ಕನೇ ಸುತ್ತು ಪ್ರವೇಶಿಸುವಲ್ಲಿ ವಿಫಲರಾದರು.
ಎರಡನೇ ಸುತ್ತಿನಲ್ಲಿ ಭಾರತದ ಅಯಾನ್ ವಜಿರಳ್ಳಿ 3-11, 4-11, 9-11ರಿಂದ ವಾಸೇಯ್ ಮಕ್ಸೂದ್ (ಕೆನಡಾ) ವಿರುದ್ಧ ಸೋತರು. ಅರಿಹಂತ್ ಕೆ.ಎಸ್. ಅವರು 11-9, 7-11, 4-11, 7-11ರಲ್ಲಿ ಲೋ ವಾ-ಸೆರ್ನ್ (ಮಲೇಷ್ಯಾ) ವಿರುದ್ಧ ಪರಾಭವಗೊಂಡರು. ಅವಲೋಕಿತ್ ಸಿಂಗ್ 6-11, 5-11, 7-11ರಿಂದಲಿ ಸಿಯೋಜಿನ್ ಓಹ್ (ದಕ್ಷಿಣ ಕೊರಿಯಾ) ವಿರುದ್ಧ ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.