ADVERTISEMENT

ಗ್ರ್ಯಾನ್‌ಪ್ರಿ –3 ಅಥ್ಲೆಟಿಕ್ಸ್‌: ಕರ್ನಾಟಕದ ಸ್ನೇಹಾ ವೇಗದ ಓಟಗಾರ್ತಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 19:41 IST
Last Updated 12 ಜೂನ್ 2024, 19:41 IST
<div class="paragraphs"><p>ಲಾಂಗ್‌ಜಂಪ್‌ ಚಿನ್ನ ಗೆದ್ದ ಕೇರಳದ ಆ್ಯನ್ಸಿ ಸೋಜನ್ </p></div>

ಲಾಂಗ್‌ಜಂಪ್‌ ಚಿನ್ನ ಗೆದ್ದ ಕೇರಳದ ಆ್ಯನ್ಸಿ ಸೋಜನ್

   

ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.

ಬೆಂಗಳೂರು: ಕರ್ನಾಟಕದ ಸ್ನೇಹಾ ಎಸ್‌.ಎಸ್‌., ಬುಧವಾರ ಇಲ್ಲಿ ನಡೆದ ಇಂಡಿಯನ್‌ ಗ್ರ್ಯಾನ್‌ಪ್ರಿ–3 ಅಥ್ಲೆಟಿಕ್‌ ಕೂಟದಲ್ಲಿ ವೇಗದ ಓಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ದಿನದ ಸ್ಪರ್ಧೆಗಳಲ್ಲಿ ಉತ್ತಮ ಪೈಪೋಟಿ ಕಂಡ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಕೇರಳದ ಆ್ಯನ್ಸಿ ಸೋಜನ್, ತಮ್ಮದೇ ರಾಜ್ಯದ ನಯನಾ ಜೇಮ್ಸ್‌ ಅವರನ್ನು ಹಿಂದೆ ಹಾಕಿ ಚಿನ್ನ ಗೆದ್ದರು.

ADVERTISEMENT

ತಿಂಗಳಾಂತ್ಯಕ್ಕೆ (ಜೂನ್ 27–30) ಪಂಚಕುಲಾದಲ್ಲಿ 63ನೇ ರಾಷ್ಟ್ರೀಯ ಸೀನಿಯರ್‌ ಅಂತರ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನಿಗದಿಯಾಗಿರುವ ಕಾರಣ, ಜೊತೆಗೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ 50 ದಿನಗಳಿಗಿಂತ ಕಡಿಮೆ ಅವಧಿ ಉಳಿದಿರುವುದರಿಂದ ದೇಶದ ಪ್ರಮುಖ ಆಥ್ಲೀಟುಗಳಲ್ಲಿ ಹೆಚ್ಚಿನವರು ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೂಟದಲ್ಲಿ ಭಾಗವಹಿಸಲಿಲ್ಲ.

ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಅಥ್ಲೀಟುಗಳು ಅಂತಿಮ ಸಿದ್ಧತೆಯ ದೃಷ್ಟಿಯಿಂದ ಪಾಲ್ಗೊಳ್ಳಲಿಲ್ಲ. ಉಳಿದಂತೆ ಹೆಚ್ಚಿನ ಅಥ್ಲೀಟುಗಳು ಪಂಚಕುಲಾದಲ್ಲಿ ಸತ್ವಪರೀಕ್ಷೆಗೆ ನಿರ್ಧರಿಸಿರುವ ಕಾರಣ ಅವರೂ ಬರಲಿಲ್ಲ. ಕಣಕ್ಕಿಳಿದವರಲ್ಲಿ ಬಹುತೇಕ ಮಂದಿ ಅಂತರರಾಜ್ಯ ಕೂಟಕ್ಕೆ ಇದನ್ನು ಸಿದ್ಧತೆಯಾಗಿ ಬಳಸಿಕೊಂಡರು. ಹೀಗಾಗಿ ಯಾರೊಬ್ಬರೂ ಒಲಿಂಪಿಕ್ಸ್‌ಗೆ ನಿಗದಿಪಡಿಸಿ ಅರ್ಹತಾ ಮಟ್ಟ ತಲುಪಲಿಲ್ಲ.

ಸ್ನೇಹಾ ಅವರಿಗೆ 100 ಮೀ. ಓಟದಲ್ಲಿ ಅಂಥ ಪೈಪೋಟಿ ಎದುರಾಗಲಿಲ್ಲ. ಆರಂಭದಲ್ಲೇ ಲೀಡ್‌ ಪಡೆದ ಅವರು 11.41 ಸೆ.ಗಳಲ್ಲಿ ಗುರಿ ಕ್ರಮಿಸಿ ಸುಲಭವಾಗಿ ಮೊದಲಿಗರಾದರು. ತಮಿಳುನಾಡಿನ ಅಭಿನಯಾ ರಾಜರಾಜನ್ ಬೆಳ್ಳಿ ಪದಕ ಗೆದ್ದುಕೊಂಡರು.

ಹೈಜಂಪ್‌ನಲ್ಲಿ ಕರ್ನಾಟಕದ ಅಭಿನಯಾ ಶೆಟ್ಟಿ ಮೊದಲಿಗರಾದರೆ, 200 ಮೀ. ಓಟದಲ್ಲಿ ಕಾವೇರಿ ಲಕ್ಷ್ಮಣಗೌಡ ಎರಡನೇ ಸ್ಥಾನ ಪಡೆದರು.

ಪುರುಷರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಆರ್ಯ ಎಸ್‌. 7.75 ಮೀ. ದೂರ ಜಿಗಿದು ಮೊದಲಿಗರಾದರು. 100 ಮೀ. ಓಟದಲ್ಲಿ ಮಣಿಕಂಠ ಹೋಬಳಿದಾರ್ (10.64 ಸೆ.) ಎರಡನೇ ಸ್ಥಾನ ಪಡೆದರು. ತಮಿಳುನಾಡಿನ ರಘು ಕುಮಾರ್ (10.56 ಸೆ.) ಮೊದಲಿಗರಾದರು.

ಫಲಿತಾಂಶಗಳು:

ಪುರುಷರು: 100 ಮೀ. ಓಟ: ರಘು ಕುಮಾರ್ ಜಿ (ತಮಿಳುನಾಡು, 10.56 ಸೆ)–1, ಮಣಿಕಂಠ ಹೋಬಳಿದಾರ್ (ಕರ್ನಾಟಕ, 10.64 ಸೆ)–2, ಅರ್ಜಿತ್‌ ರಾಣಾ (ಹರಿಯಾಣ, 10.65 ಸೆ)–3; 400 ಮೀ. ಓಟ: ಪ್ರಿನ್ಸ್‌ ಜೋಸೆಫ್‌ (ಕೇರಳ)–1, ಜೇ ಕುಮಾರ್ (ದೆಹಲಿ)–2, ಆಕಾಶ್‌ ಬಾಬು ಚಿಂತಲ (ತಮಿಳುನಾಡು)–3, ಕಾಲ: 46.46 ಸೆ.; 800 ಮೀ. ಓಟ: ಪ್ರಕಾಶ್‌ ಗಡಾದೆ (ಮಹಾರಾಷ್ಟ್ರ)–1, ಕೃಷನ್ ಕುಮಾರ್ (ಹರಿಯಾಣ)–2, ಅನು ಕುಮಾರ್ (ಉತ್ತರಾಖಂಡ)–3, ಕಾಲ: 1ನಿ.48.53 ಸೆ.; 3,000 ಮೀ. ಓಟ: ಕಿರಣ್ ಮೇತ್ರೆ (ಮಹಾರಾಷ್ಟ್ರ)–1, ಹರ್‌ಪ್ರೀತ್‌ ಸಿಂಗ್‌ (ಪಂಜಾಬ್‌)–2, ದೀಪಕ್‌ ಭಟ್‌ (ಉತ್ತರಾಖಂಡ)–3, ಕಾಲ: 8ನಿ.09.86 ಸೆ.; ಟ್ರಿಪಲ್‌ ಜಂಪ್‌: ಕಾರ್ತಿಕ್ ಯು (ಕೇರಳ)–1, ಕೃಷ್ಣ ಸಿಂಗ್ (ಮಹಾರಾಷ್ಟ್ರ)–2, ಪುನೀತ್‌ ಕುಮಾರ್ (ಉತ್ತರ ಪ್ರದೇಶ)–3, ದೂರ: 16.11 ಮೀ.; ಹೈಜಂಪ್‌: ಸ್ವಾಧಿನ್ ಕುಮಾರ್ ಮಾಝಿ (ಒಡಿಶಾ)–1, ನಿಶಾಂತ್ (ದೆಹಲಿ)–2, ರಾಜೇಶ್ ಕುಮಾರ್ (ಹರಿಯಾಣ)–3, ಎತ್ತರ: 2.10 ಮೀ. ಲಾಂಗ್‌ಜಂಪ್‌: ಆರ್ಯ ಎಸ್‌. (ಕರ್ನಾಟಕ)–1, ಸನ್ಮಥ್ ದರ್ಶನ್‌ (ತಮಿಳುನಾಡು)–2, ಶರೊನ್ ಜೆಸ್ಟಸ್‌ ಜೆ (ತಮಿಳುನಾಡು)–3, ದೂರ: 7.76 ಮೀ.; ಶಾಟ್‌ಪಟ್‌: ಪ್ರಭಕೃಪಾಲ್ ಸಿಂಗ್‌ (ಪಂಜಾಬ್‌)–1, ಒಮೇಶ್ ರಂಗ (ಪಂಜಾಬ್‌)–2, ದೂರ: 17.49 ಮೀ; ಜಾವೆಲಿನ್ ಥ್ರೊ: ಸಚಿನ್ ಯಾದವ್‌ (ಉತ್ತರಪ್ರದೇಶ)–1, ರೋಹಿತ್ ಯಾದವ್ (ಉತ್ತರ ಪ್ರದೇಶ)–2, ದೂರ: 82.69 ಮೀ.

20 ವರ್ಷದೊಳಗಿನವರು: 110 ಮೀ. ಹರ್ಡಲ್ಸ್‌: ನಯನ್ ಪ್ರದೀಪ್ ಸರ್ದೆ (ಮಹಾರಾಷ್ಟ್ರ)–1, ಸಂದೀಪ್‌ ವಿನೋದ್ ಕುಮಾರ್ (ಮಹಾರಾಷ್ಟ್ರ)–2, ಕಾಲ: 14.11 ಸೆ.; 400 ಮೀ. ಹರ್ಡಲ್ಸ್‌: ಎ.ಕಾರ್ತಿಕ್‌ ರಾಜಾ (ತಮಿಳುನಾಡು)–1, ಜೆರೋಮ್ ಸಂಜಯ್ ನಿಶಾಂತ್ (ತಮಿಳುನಾಡು)–2, ನೋಯೆಲ್ ಜೋಸೆಫ್‌ ಪ್ರಭು (ಕರ್ನಾಟಕ)–3, ಕಾಲ: 52.76 ಸೆ.; ಡಿಸ್ಕಸ್‌ ಥ್ರೊ: ಅತುಲ್ (ಹರಿಯಾಣ)–1, ರಿತಿಕ್‌ (ಚಂಡೀಗಢ)–2, ದೀಪಕ್ ಚೌಧರಿ (ರಾಜಸ್ಥಾನ)–3, ದೂರ: 54.58 ಸೆ.; ಜಾವೆಲಿನ್ ಥ್ರೊ: ಶಿವಂ ಲೋಖರೆ (ಮಹಾರಾಷ್ಟ್ರ)–1, ದೀಪಾಂಶು ಶರ್ಮಾ (ಉತ್ತರ ಪ್ರದೇಶ)_2, ರೋಹನ್ ಯಾದವ್ (ಉತ್ತರ ಪ್ರದೇಶ)–3, ದೂರ: 76.19 ಮೀ; ಶಾಟ್‌ಪಟ್‌: ನಿಖಿಲೇಶ್ (ಹರಿಯಾಣ)–1, ಸಾರ್ಥಕ್ ಸಿಂಗ್ (ಉತ್ತರ ಪ್ರದೇಶ)–2, ಅನ್ಶದೀಪ್ ರಾವತ್ (ಹರಿಯಾಣ)–3, ದೂರ: 17.57 ಮೀ.

ಮಹಿಳೆಯರು:

100 ಮೀ. ಓಟ: ಸ್ನೇಹಾ ಎಸ್‌.ಎಸ್‌. (ಕರ್ನಾಟಕ)–1, ಅಭಿನಯಾ ರಾಜರಾಜನ್ (ತಮಿಳುನಾಡು)–2, ವಿ.ಸುಧೀಕ್ಷಾ (ಕರ್ನಾಟಕ)–3, ಕಾಲ: 11.41 ಸೆ.; 200 ಮೀ. ಓಟ: ನಿತ್ಯಾ ಗಂಧೆ (ತೆಲಂಗಾಣ)–1, ಕಾವೇರಿ ಲಕ್ಷ್ಮಣಗೌಡ (ಕರ್ನಾಟಕ)–2, ಅಭಿನಯಾ ರಾಜರಾಜನ್ –3, ಕಾಲ: 24.23 ಸೆ.; 400 ಮೀ. ಒಟ: ದಂಡಿ ಜ್ಯೋತಿಶ್ರೀ (ಆಂಧ್ರಪ್ರದೇಶ)–1, ಶುಭಾ ವೆಂಕಟೇಶನ್ (ತಮಿಳುನಾಡು)–2, ಪೂವಮ್ಮ ರಾಜು (ಕರ್ನಾಟಕ)–3, ಕಾಲ: 51.53 ಸೆ.; 800 ಮೀ: ಹೀನಾ (ಹರಿಯಾಣ)–1, ಅರ್ಪಿತಾ ಇ.ಬಿ. (ಕರ್ನಾಟಕ)–2, ವಿನೀತಾ ಗುರ್ಜರ್ (ಉತ್ತರ ಪ್ರದೇಶ)–3, ಕಾಲ: 2ನಿ.12.21 ಸೆ.; 3000 ಮೀ.: ಅಕ್ಷಣಾ (ಮಧ್ಯಪ್ರದೇಶ)–1, ಸಂಘಮಿತ್ರ ಮಹತಾ (ಜಾರ್ಖಂಡ್‌)–2, ಪ್ರಾಚಿ ದೇವ್ಕರ್ (ಮಹಾರಾಷ್ಟ್ರ)–3, ಕಾಲ: 9ನಿ.55.14 ಸೆ.; ಲಾಂಗ್‌ಜಂಪ್‌: ಆ್ಯನ್ಸಿ ಸೋಜನ್ ಇ (ಕೇರಳ)–1, ನಯನಾ ಜೇಮ್ಸ್ (ಕೇರಳ)–2, ಭವಾನಿ ಯಾದವ್‌ (ಆಂಧ್ರಪ್ರದೇಶ)–3, ದೂರ: 6.52 ಮೀ.; ಟ್ರಿಪಲ್‌ ಜಂಪ್‌: ಪೂರ್ವಾ ಹಿತೇಶ್ ಸಾವಂತ್‌ (ಮಹಾರಾಷ್ಟ್ರ)–1, ಶಾರ್ವರಿ ಅವಿನಾಶ್‌ ಪಾರುಲೆ (ಮಹಾರಾಷ್ಟ್ರ)–2, ಅಂಬಿಕಾ ಜಝಾರಿ (ಅಸ್ಸಾಂ)–3, ದೂರ: 13.14 ಮೀ.; ಹೈಜಂಪ್‌: ಅಭಿನಯಾ ಶೆಟ್ಟಿ (ಕರ್ನಾಟಕ)–1, ಕೆವಿನಾ (ತಮಿಳುನಾಡು)–2, ಎತ್ತರ: 1.74 ಮೀ.; ಜಾವೆಲಿನ್ ಥ್ರೊ: ರಶ್ಮಿ ಕೆ. (ಆಂಧ್ರಪ್ರದೇಶ)–1, ಲಲಿತಾ ಚೌಧರಿ (ರಾಜಸ್ಥಾನ)–2,  ದೂರ: 46.69 ಮೀ.; ಶಾಟ್‌ಪಟ್‌: ಅಭಾ ಖತುವಾ (ಮಹಾರಾಷ್ಟ್ರ)–1, ಶಿಕ್ಷಾ (ಹರಿಯಾಣ)–2, ಅಂಬಿಕಾ ವಿ. (ಕರ್ನಾಟಕ)–3, ದೂರ: 17.93 ಮೀ.

20 ವರ್ಷದೊಳಗಿನವರು: 100 ಮೀ. ಹರ್ಡಲ್ಸ್‌: ಅಲಿಝಾ ಅಫ್ತಾಬ್ ಮುಲ್ಲಾ (ಮಹಾರಾಷ್ಟ್ರ)–1, ಶಬಿತಾ ಟೊಪ್ಪೊ (ಒಡಿಶಾ)–2, ಕೃಷ್ಣಾ ಪ್ರಿಯಾ (ಕೇರಳ)–3, ಕಾಲ: 14.26 ಸೆ.; ಜಾವೆಲಿನ್‌ ಥ್ರೊ: ಪ್ರತೀಕ್ಷಾ ಪಟೇಲ್ (ಉತ್ತರ ಪ್ರದೇಶ)–1, ನಿಶಿ ಕುಮಾರಿ (ಬಿಹಾರ)–2, ದೂರ: 46.00 ಮೀ.; 400 ಮೀ. ಹರ್ಡಲ್ಸ್‌: ಶ್ರೀವರ್ತನಿ ಎಸ್‌.ಕೆ. (ತಮಿಳುನಾಡು)–1, ಕಾಲ: 1ನಿ.04.84 ಸೆ.; ಶಾಟ್‌ಪಟ್‌: ಪೂಜಾ ಕುಮಾರಿ (ರಾಜಸ್ಥಾನ)–1, ದೂರ: 13.37 ಮೀ.

ಪುರುಷರ ವಿಭಾಗದ ಲಾಂಗ್‌ಜಂಪ್‌ ಚಿನ್ನ ಗೆದ್ದ ಕರ್ನಾಟಕದ ಆರ್ಯ ಎಸ್‌. ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.