ADVERTISEMENT

ಗಾಲ್ಫ್‌ ಆಡುವಾಗ ಗಾಯ ಮಾಡಿಕೊಂಡ ಬೌಲರ್‌ ಜೇಮ್ಸ್‌ ಆ್ಯಂಡರ್ಸ್‌ನ್‌

ಪಿಟಿಐ
Published 6 ಆಗಸ್ಟ್ 2018, 17:55 IST
Last Updated 6 ಆಗಸ್ಟ್ 2018, 17:55 IST
ಜೇಮ್ಸ್‌ ಆ್ಯಂಡರ್ಸ್‌ನ್‌
ಜೇಮ್ಸ್‌ ಆ್ಯಂಡರ್ಸ್‌ನ್‌   

ಲಂಡನ್‌ : ವೇಗದ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಹುಟ್ಟಿಸುವ ಇಂಗ್ಲೆಂಡ್‌ ತಂಡದ ಜೇಮ್ಸ್‌ ಆ್ಯಂಡರ್ಸ್‌ನ್‌ ಅವರು ಗಾಲ್ಫ್‌ ಆಡುವ ವೇಳೆ ಗಾಯಗೊಂಡಿದ್ದಾರೆ.

ಈ ವಿಷಯವನ್ನು ತಂಡದ ಸಹ ಆಟಗಾರ ಸ್ಟುವರ್ಟ್‌ ಬ್ರಾಡ್‌ ಬಹಿರಂಗಪಡಿಸಿದ್ದಾರೆ. ಆ್ಯಂಡರ್ಸನ್‌ ಅವರು ಗಾಲ್ಫ್‌ ಸ್ಟಿಕ್‌ನಿಂದ ಚೆಂಡನ್ನು ಬಾರಿಸಿದ್ದಾರೆ. ಆದರೆ, ಚೆಂಡು ಸ್ವಿಂಗ್‌ ಆಗಿ ಹತ್ತಿರದಲ್ಲಿದ್ದ ಮರಕ್ಕೆ ಬಡಿದು ಆ್ಯಂಡರ್ಸನ್‌ ಅವರ ಮುಖಕ್ಕೆ ಅಪ್ಪಳಿಸಿದೆ.

ಈ ಸಂದರ್ಭದ ವಿಡಿಯೊವನ್ನು ಆ್ಯಂಡರ್ಸನ್‌ ಅವರೊಂದಿಗಿದ್ದ ಬ್ರಾಡ್‌, ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ, ‘ಜಿಮ್ಮಿಗೆ’ ಗಂಭೀರ ಸ್ವರೂಪದ ಗಾಯವಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

*

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.