ADVERTISEMENT

200 ಮೀ. ಫ್ರೀಸ್ಟೈಲ್‌: ಟಿಟ್ಮಸ್‌ ವಿಶ್ವದಾಖಲೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 4:19 IST
Last Updated 13 ಜೂನ್ 2024, 4:19 IST
   

ಬ್ರಿಸ್ಬೇನ್‌: ಅರಿಯಾರ್ನೆ ಟಿಟ್ಮಸ್‌ ಅವರು ಆಸ್ಟ್ರೇಲಿಯಾದ ಒಲಿಂಪಿಕ್ಸ್‌ ಈಜು ಟ್ರಯಲ್ಸ್‌ನಲ್ಲಿ ಬುಧವಾರ ಮಹಿಳೆಯರ 200 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಸ್ಥಾಪಿಸಿದರು. ಆ ಮೂಲಕ ಪ್ಯಾರಿಸ್‌ ಕೂಟದಲ್ಲಿ ತಮ್ಮ ಚಿನ್ನದ ಪದಕವನ್ನು ಉಳಿಸಿಕೊಳ್ಳುವ  ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟರು.

ಬ್ರಿಸ್ಟೇನ್‌ನಲ್ಲಿ ನಡೆದ ಕೂಟದ ಫೈನಲ್‌ನಲ್ಲಿ ಅವರು 1ನಿ.52.23 ಸೆ.ಗಳಲ್ಲಿ ಗುರಿ ತಲುಪಿದರು. ಕಳೆದ ವರ್ಷ ಫುಕುವೊಕಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ಒ‘ಕ್ಯಾಲಗನ್ ಅವರು ಈ ಹಿಂದಿನ ವಿಶ್ವ ದಾಖಲೆ (1:52.85) ಸ್ಥಾಪಿಸಿದ್ದರು. ಎರಡನೇ ಸ್ಥಾನ ಪಡೆದ ಕ್ಯಾಲಗನ್ ಅವರೂ 1:52.48 ಸೆ.ಗಳಲ್ಲಿ ಅಂತರ ಕ್ರಮಿಸುವ ಮೂಲಕ ಹಳೆಯ ವಿಶ್ವದಾಖಲೆ ಸುಧಾರಿಸಿದರು.

ಒಲಿಂಪಿಕ್ಸ್: ನಡಾಲ್, ಅಲ್ಕರಾಜ್ ಜೋಡಿ

ADVERTISEMENT

ಮ್ಯಾಡ್ರಿಡ್ (ಎಪಿ): ದಿಗ್ಗಜ ಆಟಗಾರ ರಫೆಲ್ ನಡಾಲ್ ಮತ್ತು ಕಾರ್ಲೋಸ್ ಅಲ್ಕರಾಜ್ ಅವರು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಪುರುಷರ ಟೆನಿಸ್ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 

ಸ್ಪೇನ್ ದೇಶದ ಇಬ್ಬರೂ ಆಟಗಾರರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 21 ವರ್ಷದ ಅಲ್ಕರಾಜ್ ಅವರು ಈಚೆಗಷ್ಟೇ ಫ್ರೆಂಚ್ ಓಪನ್ ಕಿರೀಟ ಜಯಿಸಿದ್ದರು. 

ಶಾರ್ದೂಲ್‌ಗೆ ಶಸ್ತ್ರಚಿಕಿತ್ಸೆ

ಲಂಡನ್‌ (ಪಿಟಿಐ): ಭಾರತ ತಂಡದ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್ ಅವರಿಗೆ ಬುಧವಾರ ಇಲ್ಲಿ ಪಾದದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು.

ಕನಿಷ್ಠ ಮೂರು ತಿಂಗಳು ಅವರು ಕ್ರಿಕೆಟ್‌ನಿಂದ ದೂರವಿರುವ ನಿರೀಕ್ಷೆಯಿದೆ. ಇದು ಅವರಿಗೆ ಎರಡನೇ ಶಸ್ತ್ರಚಿಕಿತ್ಸೆ. 2019ರಲ್ಲೂ ಅವರಿಗೆ ಪಾದದ ಶಸ್ತ್ರಚಿಕಿತ್ಸೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.