ADVERTISEMENT

ಲಂಡನ್‌: ಅರ್ಜುನ್‌ಗೆ ಚೆಸ್‌ ಪ್ರಶಸ್ತಿ

ಪಿಟಿಐ
Published 18 ಅಕ್ಟೋಬರ್ 2024, 18:16 IST
Last Updated 18 ಅಕ್ಟೋಬರ್ 2024, 18:16 IST
ಅರ್ಜುನ್ ಇರಿಗೇಶಿ
ಅರ್ಜುನ್ ಇರಿಗೇಶಿ   

ಲಂಡನ್‌: ಆರ್ಮ್‌ಗೆಡನ್‌ ಗೇಮ್‌ನಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರ ಹೋರಾಟವನ್ನು ಬದಿಗೊತ್ತಿದ ಭಾರತದ ಗ್ರ್ಯಾಂಡ್‌ ಮಾಸ್ಟರ್ ಅರ್ಜುನ್ ಇರಿಗೇಶಿ, ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಗುರುವಾರ ನಡೆದ ಫೈನಲ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಮಾದರಿಯ ಮೊದಲ ಎರಡು ಆಟಗಳು ಡ್ರಾ ಆದವು. ನಂತರ ವಿಜೇತರನ್ನು ನಿರ್ಧರಿಸಲು ಆರ್ಮ್‌ಗೆಡನ್‌ (ಟೈಬ್ರೇಕರ್‌) ನೆರವು ಪಡೆಯಲಾಯಿತು. ಎರಡು ಗೇಮ್‌ಗಳ ಟೈಬ್ರೇಕರ್‌ನಲ್ಲಿ ಅರ್ಜುನ್‌ಗೆ ಜಯ ಒಲಿಯಿತು.

ಮೊದಲ ಬಹುಮಾನವಾಗಿ ₹18.23 ಲಕ್ಷ ಅರ್ಜುನ್ ಜೇಬಿಗಿಳಿ ಯಿತು. 16 ಆಟಗಾರರು ಟೂರ್ನಿಯಲ್ಲಿ ಅರ್ಜುನ್‌ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು.

ADVERTISEMENT

ಸೆಮಿಫೈನಲ್‌ನಲ್ಲಿ ಸ್ವದೇಶದ ಆರ್‌.ಪ್ರಜ್ಞಾನಂದ ವಿರುದ್ಧ 1.5–0.5 ರಿಂದ ಜಯಗಳಿಸಿದ್ದರು. ಎರಡನೇ ಸುತ್ತಿನಲ್ಲಿ ಭಾರತದ ಇನ್ನೊಬ್ಬ ಆಟಗಾರ ವಿದಿತ್ ಗುಜರಾತಿ ಅವರನ್ನು 1.5–0.5 ರಿಂದ ಸೋಲಿಸಿದ್ದರು.

ಮೊದಲ ಸುತ್ತಿನಲ್ಲಿ ತೆಲಂಗಾಣದ ಆಟಗಾರ 2–0 ಯಿಂದ ಇಂಗ್ಲೆಂಡ್‌ನ 9 ವರ್ಷದ ಆಟಗಾರ್ತಿ  ಶಿವಾನಂದನ್ ಬೋಧನಾ ವಿರುದ್ಧ ಜಯಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.