ನವದೆಹಲಿ: ಇತ್ತೀಚೆಗಷ್ಟೇ ತಾನು ಗೆದ್ದ ಟ್ರೋಫಿಗಳನ್ನೆಲ್ಲಾ ಮಾರಿ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದ ಹದಿಹರೆಯದ ಗಾಲ್ಫರ್ ಅರ್ಜುನ್ ಭಾಟಿ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ 15ರ ಹರೆಯದ ಅರ್ಜುನ್ ಕಿತ್ತುಹೋದ ತನ್ನ ಶೂಗಳನ್ನು ಮಾರಿ ₹ 3.3 ಲಕ್ಷ ಸಂಗ್ರಹಿಸಿಕೊಟ್ಟಿದ್ದಾರೆ.
ಗ್ರೇಟರ್ ನೊಯ್ಡಾದ ಪ್ರತಿಭಾನ್ವಿತ ಗಾಲ್ಫ್ ಆಟಗಾರ, 2018ರ ಜೂನಿಯರ್ ವಿಶ್ವ ಕಪ್ ಯಶಸ್ಸಿನ ವೇಳೆ ಈ ಬೂಟು ಧರಿಸಿದ್ದರು. ‘ಈ ಶೂಗಳನ್ನು ತನ್ನ ಚಿಕ್ಕಪ್ಪ ವನಿಶ್ ಪ್ರಧಾನ್‌ಜಿ ಅವರು ₹ 3,30,000 ಕೊಟ್ಟು ಖರೀದಿ ಮಾಡಿದ್ದಾರೆ. ಈ ಮೊತ್ತವನ್ನೂ ಪಿಎಂ ಕೇರ್ಸ್ ನಿಧಿಗೆ ನೀಡಿದ್ದೇನೆ’ ಎಂದು ಅರ್ಜುನ್ ಮಂಗಳವಾರ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಮಾರ್ಚ್ ಕೊನೆಯಲ್ಲಿ ಅರ್ಜುನ್ ಇದುವರೆಗೆ ಗೆದ್ದುಕೊಂಡಿದ್ದ 102 ಟ್ರೋಫಿಗಳನ್ನು ಮಾರಿ ₹ 4.30 ಲಕ್ಷ ಗಳಿಸಿದ್ದರು.
‘ನಾವು ಬದುಕುತ್ತೇವೊ, ಇಲ್ಲವೊ, ಆದರೆ ದೇಶ ಉಳಿಯಬೇಕು. ಎಲ್ಲರನ್ನೂ ಕೊರೊನಾದಿಂದ ರಕ್ಷಿಸಬೇಕು‘ ಎಂಬ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.