ತಾಷ್ಕೆಂಟ್, ಉಜ್ಬೆಕಿಸ್ತಾನ: ಟೋಕಿಯೊ ಒಲಿಂಪಿಯನ್ ಆಶಿಶ್ ಚೌಧರಿ ಅವರು ಇಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಮಂಗಳವಾರ ನಡೆದ 80 ಕೆಜಿ ವಿಭಾಗದ ಸ್ಪರ್ಧೆಯ ಮೊದಲ ಸುತ್ತಿನ ಬೌಟ್‌ನಲ್ಲಿ ಆಶಿಶ್ 4–1ರಿಂದ ಇರಾನ್‌ನ ಮೇಯಸಮ್ ಗೆಸಲಾಗಿ ಅವರನ್ನು ಪರಾಭವಗೊಳಿಸಿದರು. ಈ ಫಲಿತಾಂಶದಲ್ಲಿ ರೆಫರಿಗಳ ತೀರ್ಮಾನ ಒಮ್ಮತವಾಗಿರಲಿಲ್ಲ.
28 ವರ್ಷದ ಆಶಿಶ್ ಅವರು ಎದುರಾಳಿಯ ಮೇಲೆ ಬಲಿಷ್ಠ ಪಂಚ್‌ಗಳನ್ನು ಪ್ರಯೋಗಿಸಿದರು. 2019ರ ಏಷ್ಯಾ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಭಾರತದ ಬಾಕ್ಸರ್, ಚುರುಕಿನ ಪಾದಚಲನೆ ಮತ್ತು ತಾಂತ್ರಿಕ ಸಾಮರ್ಥ್ಯದ ಬಲದಿಂದ ಮೇಯಸಮ್ ಅವರನ್ನು ಕಂಗೆಡಿಸಿದರು.
16ರ ಘಟ್ಟದಲ್ಲಿ ಆಶಿಶ್ ಅವರಿಗೆ ಕಠಿಣ ಸವಾಲು ಎದುರಾಗಿದ್ದು, ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್, ಕ್ಯೂಬಾದ ಅರ್ಲೆನ್ ಲೊಪೆಜ್ ವಿರುದ್ಧ ಸೆಣಸಲಿದ್ದಾರೆ.
ಹರ್ಷಗೆ ನಿರಾಸೆ: ಇದೇ ಮೊದಲ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದ ಹರ್ಷ (86 ಕೆಜಿ ವಿಭಾಗ) ಮೊದಲ ಸುತ್ತಿನ ಬೌಟ್‌ನಲ್ಲಿ 0–5ರಿಂದ ಆಸ್ಟ್ರೇಲಿಯಾದ ಮೆಕ್‌ಅಲಿಸ್ಟರ್ ಎದುರು ಪರಾಭವಗೊಂಡರು.
ಬುಧವಾರ ನಡೆಯಲಿರುವ ಬೌಟ್‌ನಲ್ಲಿ ನಿಶಾಂತ್ ದೇವ್ (71 ಕೆಜಿ) ಅವರು ಅಜರ್‌ಬೈಜಾನ್‌ನ ಸರ್ಕಾನ್ ಅಲಿಯೆವ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.