ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿಭಾರತದ ಅಥ್ಲೇಟ್‌ಗಳ ಪದಕ ಬೇಟೆ ಮುಂದುವರಿದಿದೆ.
ಸೋಮವಾರ ಪುರುಷರ 10 ಮೀಟರ್ಸ್ಏರ್ ರೈಫೆಲ್ ಸ್ಪರ್ಧೆಯಲ್ಲಿ ಭಾರತದ ದೀಪಕ್ ಕುಮಾರ್ ಬೆಳ್ಳಿ ಪದಕ ಜಯಿಸಿದ್ದಾರೆ.
ಚೀನಾದ ಹರಾನ್ ಯಾಂದ್ 249.1 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು. 247.7 ಅಂಕಗಳೊಂದಿಗೆ ದೀಪಕ್ ಕುಮಾರ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು.
10 ಮೀಟರ್ಸ್ ಏರ್ ರೈಫೆಲ್ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಅಪೂರ್ವಿ ಚಾಂಡೇಲಾ ಮತ್ತು ರವಿಕುಮಾರ್ ಜೋಡಿ ಭಾನುವಾರ ಕಂಚಿನ ಪದಕ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.