ADVERTISEMENT

ಏಷ್ಯನ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಜಪಾನ್‌ ವಿರುದ್ಧ ಭಾರತ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 15:32 IST
Last Updated 18 ಅಕ್ಟೋಬರ್ 2024, 15:32 IST
<div class="paragraphs"><p>ಏಷ್ಯನ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭಾರತ ಮತ್ತು ಜಪಾನ್‌ ತಂಡಗಳ ಆಟಗಾರ್ತಿಯರ ಸೆಣಸಾಟ</p></div>

ಏಷ್ಯನ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭಾರತ ಮತ್ತು ಜಪಾನ್‌ ತಂಡಗಳ ಆಟಗಾರ್ತಿಯರ ಸೆಣಸಾಟ

   

ಬೆಂಗಳೂರು: ಆತಿಥೇಯ ಭಾರತ ತಂಡವು ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 13ನೇ ಏಷ್ಯನ್‌ ನೆಟ್‌ಬಾಲ್‌ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು.

ಸ್ಪರ್ಧೆಯ ಮೊದಲ ದಿನವಾದ ಶುಕ್ರವಾರ ಸುರಭಿ ಬಿ.ಆರ್‌. ನೇತೃತ್ವದ ಭಾರತ ತಂಡವು 55–22ರಿಂದ ಜಪಾನ್‌ ತಂಡವನ್ನು ಸುಲಭವಾಗಿ ಮಣಿಸಿತು.

ADVERTISEMENT

ದಿನದ ಇತರ ಪಂದ್ಯಗಳಲ್ಲಿ ಸಿಂಗಪುರ 122–03 ರಿಂದ ಇರಾಕ್‌ ತಂಡವನ್ನು; ಶ್ರೀಲಂಕಾ 73–44 ರಿಂದ ಫಿಲಿಪ್ಪೀನ್ಸ್‌ ತಂಡವನ್ನು; ಹಾಂಗ್‌ಕಾಂಗ್‌ 77–11ರಿಂದ ಚೀನಾ ತೈಪೆ ತಂಡವನ್ನು; ಮಾಲ್ಡೀವ್ಸ್ 74–13ರಿಂದ ಸೌದಿ ಅರೇಬಿಯಾ ತಂಡವನ್ನು ಮಣಿಸಿದವು.

ಟೂರ್ನಿಯಲ್ಲಿ ಒಟ್ಟು 14 ರಾಷ್ಟ್ರಗಳ ತಂಡಗಳು ಪಾಲ್ಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.