ಅಸ್ತಾನ, ಕಜಕಸ್ತಾನ: ಭಾರತದ ನಿಶಾ ದಹಿಯಾ ಹಾಗೂ ಪ್ರಿಯಾ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಮಂಗಳವಾರ ರಾತ್ರಿ ನಡೆದ ಮಹಿಳೆಯರ 68 ಕೆಜಿ ಫೈನಲ್ ಬೌಟ್ ನಲ್ಲಿ ನಿಶಾ 0–10ರಿಂದ ಜಪಾನ್‌ನ ಅಮಿ ಇಶೀ ಎದುರು ಪರಾಭವಗೊಂಡರು.
ನಿಶಾ, ಚಿನ್ನದ ಪದಕದ ಸುತ್ತಿನಲ್ಲಿ ಸುಲಭವಾಗಿ ಸೋಲೊಪ್ಪಿಕೊಂಡರು. 76 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಿಯಾ ಅವರು ಕಂಚಿನ ಪದಕದ ಬೌಟ್‌ನಲ್ಲಿ 2–1ರಿಂದ ಜಪಾನ್‌ನ ಮಿಜುಕಿ ನಗಶಿಮಾ ಅವರನ್ನು ಮಣಿಸಿದರು.
ಫೈನಲ್‌ಗೆ ಅಂತಿಮ್: ಅಂತಿಮ್ ಪಂಘಲ್ ಅವರು ಬುಧವಾರ 53 ಕೆಜಿ ವಿಭಾಗದ ಫೈನಲ್ ತಲುಪಿದರು. ಅನ್ಷು ಮಲಿಕ್ (57 ಕೆಜಿ) ಕಂಚಿನ ಪದಕದ ಸುತ್ತು ಪ್ರವೇಶಿಸಿದರು.
ಸೆಮಿಫೈನಲ್ ಬೌಟ್‌ನಲ್ಲಿ ಅಂತಿಮ್ ಅವರಿಗೆ 8–1ರಿಂದ ಉಜ್ಬೆಕಿಸ್ತಾನದ ಅಖ್ತೆಂಗೆ ಕೆನಿಮ್‌ಜಯೆವಾ ಎದುರು ಗೆಲುವು ಒಲಿಯಿತು. ಎಂಟರಘಟ್ಟದಲ್ಲಿ ಅಂತಿಮ್ 6–0ಯಿಂದ ಚೀನಾದ ಲಿ ಡೆಂಗ್ ಎದುರು ಗೆದ್ದಿದ್ದರು. ಚಿನ್ನದ ಪದಕದ ಸುತ್ತಿನಲ್ಲಿ ಅಂತಿಮ್ 2021ರ ವಿಶ್ವ ಚಾಂಪಿಯನ್ ಜಪಾನ್‌ನ ಅಕಾರಿ ಫುಜಿನಾಮಿ ಅವರನ್ನು ಎದುರಿಸುವರು.
ಸೆಮಿಫೈನಲ್‌ನಲ್ಲಿ ಅನ್ಷು 1–5ರಿಂದ ಜಪಾನ್‌ನ ನಂಜೊ ಎದುರು ಸೋತರು. ಕಂಚಿನ ಪದಕದ ಸುತ್ತಿನಲ್ಲಿ ಅವರು ಮಂಗೋಲಿಯಾದ ಎರ್ಡೆನೆಸುಡ್ ಬಾಟ್ ಎರ್ಡೆನೆ ಎದುರು ಸ್ಪರ್ಧಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.