ಹುಬ್ಬಳ್ಳಿ: ಅಥ್ಲೆಟಿಕ್ ಕೋಚ್ ಆಗಿ ರಾಜ್ಯದ ಸಾಕಷ್ಟು ಅಥ್ಲೀಟ್‌ಗಳ ಬದುಕು ರೂಪಿಸಿದ್ದ ಶಿವಕುಮಾರ ಎಸ್. ಅಗಡಿ (78) ಬುಧವಾರ ಬೆಳಿಗ್ಗೆ ಧಾರವಾಡದಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬನ್ನೂರು ಗ್ರಾಮದಲ್ಲಿ ಜನಿಸಿದ್ದ ಅಗಡಿ ಅವರು ‘ಅಥ್ಲೀಟ್ ಕೋಚ್‌ಗಳ ಕೋಚ್’ ಎಂದೇ ಹೆಸರಾಗಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಅಥ್ಲೆಟಿಕ್ ಕೋಚ್ ಆಗಿ ಕಲಬುರ್ಗಿಯಲ್ಲಿ 10 ವರ್ಷ, ವಿಜಯಪುರದಲ್ಲಿ ಐದು ವರ್ಷ ಮತ್ತು ಮೈಸೂರಿನಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದಾರೆ. ಉತ್ತರ ಕರ್ನಾಟಕದ ಏಕೈಕ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರ ಹೊಂದಿರುವ ಧಾರವಾಡದಲ್ಲಿ ಅವರು ಸಹಾಯಕ ನಿರ್ದೇಶಕರಾಗಿ ಹಾಗೂ ಕೋಚ್ ಆಗಿ 12 ವರ್ಷ ಕರ್ತವ್ಯ ನಿರ್ವಹಿಸಿದ್ದರು.
ಅಂತರರಾಷ್ಟ್ರೀಯ ಅಥ್ಲೀಟ್ ಬಿ.ಜಿ. ನಾಗರಾಜ, ವಿಲಾಸ್ ನೀಲಗುಂದ ರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಜಯಿಸಿರುವ ಮಹೇಶ್ವರಿ ಉದಗಟ್ಟಿ, ನಾಗರತ್ನ ಹಿರೇಮಠ, ಮಂಜುನಾಥ ಹೀಗೆ ಅನೇಕರ ಬದುಕಿಗೆ ನೆರವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.