ADVERTISEMENT

ಅಥ್ಲೆಟಿಕ್ಸ್‌: ‘ಮೈಸೂರು ಉತ್ತರ’ ಚಾಂಪಿಯನ್

ಮೈಸೂರು ದಕ್ಷಿಣ ರನ್ನರ್‌ಅಪ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 6:38 IST
Last Updated 26 ಅಕ್ಟೋಬರ್ 2024, 6:38 IST
<div class="paragraphs"><p>ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪ್ರೌಢಶಾಲೆಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆದ್ದ ‘ಮೈಸೂರು ಉತ್ತರ’ ತಂಡಕ್ಕೆ&nbsp;ಬಿ.ಎ.ಸೋಮಶೇಖರ್ ಟ್ರೋಫಿ ನೀಡಿದರು.  </p></div>

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪ್ರೌಢಶಾಲೆಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆದ್ದ ‘ಮೈಸೂರು ಉತ್ತರ’ ತಂಡಕ್ಕೆ ಬಿ.ಎ.ಸೋಮಶೇಖರ್ ಟ್ರೋಫಿ ನೀಡಿದರು.

   

–ಪ್ರಜಾವಾಣಿ ಚಿತ್ರ

ಮೈಸೂರು: ‘ಮೈಸೂರು ಉತ್ತರ’ ಶೈಕ್ಷಣಿಕ ತಾಲ್ಲೂಕಿನ ಬಾಲಕ, ಬಾಲಕಿಯರ ತಂಡಗಳು ಶುಕ್ರವಾರ ಮುಕ್ತಾಯಗೊಂಡ ಪ್ರೌಢಶಾಲೆಗಳ 2023–24ನೇ ಸಾಲಿನ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಸಮಗ್ರ ಚಾಂಪಿಯನ್‌ಷಿಪ್‌ ತಮ್ಮದಾಗಿಸಿಕೊಂಡವು. ಅಭಿಷೇಕ್‌, ವರುಣ್‌ ಹಾಗೂ ವರ್ಷಾ ಎಸ್‌.ಗೌಡ ವೈಯಕ್ತಿಕ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.

ADVERTISEMENT

‘ಮೈಸೂರು ಉತ್ತರ’ ತಂಡವು ಬಾಲಕರ ವಿಭಾಗದಲ್ಲಿ 34 ಹಾಗೂ ಬಾಲಕಿಯರ ವಿಭಾಗದಲ್ಲಿ 29 ಸೇರಿದಂತೆ ಒಟ್ಟಾರೆ 63 ಅಂಕ ಗಳಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಅವರಿಗೆ ಸ್ಪರ್ಧೆ ಒಡ್ಡಿದ ಮೈಸೂರು ದಕ್ಷಿಣ ಅಥ್ಲೀಟ್‌ಗಳು ಒಟ್ಟಾರೆ 52 ಅಂಕಗಳೊಂದಿಗೆ ರನ್ನರ್‌ ಅಪ್‌ ಆದರು.

ಬಾಲಕರ ವಿಭಾಗದಲ್ಲಿ ಮೈಸೂರು ತಾಲ್ಲೂಕಿನ ವಿದ್ಯಾಜ್ಯೋತಿ ಪ್ರೌಢಶಾಲೆಯ ವರುಣ್‌ ಹರ್ಡಲ್ಸ್‌ನಲ್ಲಿ ಚಿನ್ನ, 400 ಮೀ. ಹಾಗೂ 800 ಮೀ. ಓಟದಲ್ಲಿ ಬೆಳ್ಳಿ ಗೆದ್ದು 11 ಅಂಕ ಪಡೆದರೆ, ಕೆ.ಆರ್.ನಗರದ ಬಿಎಸ್‌ ಮಾದಪ್ಪ ಶಾಲೆಯ ಎಂ.ಎ.ಅಭಿಷೇಕ್ ಅವರು 400 ಮೀ. ಹಾಗೂ 800 ಮೀ. ಓಟದಲ್ಲಿ ಬೆಳ್ಳಿ ಹಾಗೂ ಟ್ರಿಪಲ್ ಜಂಪ್‌ನಲ್ಲಿ ಕಂಚು ಗೆಲ್ಲುವ ಮೂಲಕ ಅಷ್ಟೇ ಅಂಕ ಕಲೆಹಾಕಿ ವೈಯಕ್ತಿಕ ಚಾಂಪಿಯನ್‌ ಪ್ರಶಸ್ತಿ ಪಡೆದರು.

ಬಾಲಕಿಯರ ವಿಭಾಗದಲ್ಲಿ ಮೈಸೂರು ದಕ್ಷಿಣದ ಮರಿಮಲ್ಲಪ್ಪ ಶಾಲೆಯ ವರ್ಷಾ ಎಸ್‌. ಗೌಡ ಶಾಟ್‌ಪಟ್‌, ಡಿಸ್ಕಸ್‌ ಥ್ರೋ, ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ಒಟ್ಟು 15 ಅಂಕ ಸಂಪಾದಿಸಿ ವೈಯಕ್ತಿಕ ಚಾಂಪಿಯನ್‌ ಟ್ರೋಫಿ ಎತ್ತಿಹಿಡಿದರು.

ಫಲಿತಾಂಶ: ಬಾಲಕರ ವಿಭಾಗ: 100 ಮೀ. ಓಟ: ಏಕಾಂತ್‌ (ಬಿ.ಎಸ್.ಮಾದಪ್ಪ ಶಾಲೆ, ಕೆ.ಆರ್.ನಗರ. ಕಾಲ: 11.38 ಸೆಕೆಂಡ್‌)–1, ಜಶ್ವಂತ್ (ರೋಟರಿ ಶಾಲೆ, ಹುಣಸೂರು)–2, ರಾಹುಲ್‌ (ಸರ್ಕಾರಿ ಪ್ರೌಢಶಾಲೆ, ಕಟ್ಟೆಮಳಲವಾಡಿ, ಹುಣಸೂರು)–3. 200 ಮೀ. ಓಟ: ಗೌತಮ್ (ಸದ್ವಿದ್ಯಾ ಶಾಲೆ, ಮೈಸೂರು ಉತ್ತರ. ಕಾಲ: 23 ಸೆಕೆಂಡ್‌)–1, ರಾಹುಲ್ (ಸರ್ಕಾರಿ ಪ್ರೌಢಶಾಲೆ, ಕಟ್ಟೆಮಳಲವಾಡಿ, ಹುಣಸೂರು)–2, ಲಸಿತ್ ಕಿಶೋರ್ (ವಿಜಯವಿಠ್ಠಲ ಶಾಲೆ, ಮೈಸೂರು ದಕ್ಷಿಣ)–3. 800 ಮೀ. ಓಟ: ಅಭಿಷೇಕ್‌ (ಬಿ.ಎಸ್‌.ಮಾದಪ್ಪ ಶಾಲೆ, ಕೆ.ಆರ್.ನಗರ. ಕಾಲ: 2 ನಿಮಿಷ 9.50 ಸೆಕೆಂಡ್‌)–1, ವರುಣ್ (ವಿದ್ಯಾಜ್ಯೋತಿ ಶಾಲೆ, ಮೈಸೂರು ತಾಲ್ಲೂಕು)–2, ಚಂದನ್‌ (ಸರ್ಕಾರಿ ಪ್ರೌಢಶಾಲೆ, ಗುರುಪುರ, ಹುಣಸೂರು)–3. 1,500 ಮೀ. ಓಟ: ಶಶಾಂಕ್‌ (ಸರ್ಕಾರಿ ಪ್ರೌಢಶಾಲೆ, ಭುವನಹಳ್ಳಿ, ಪಿರಿಯಾಪಟ್ಟಣ. ಕಾಲ: 4 ನಿಮಿಷ 47.72 ಸೆಕೆಂಡ್)–1, ಕಿರಣ್ (ಸರ್ಕಾರಿ ಶಾಲೆ, ಹುಂಡಿಮಾಳ, ಹುಣಸೂರು)–2, ಕೆ.ಎನ್‌.ಮನು (ಟಿಎಸ್‌ಎಸ್‌ ಶಾಲೆ, ಎಚ್‌.ಡಿ.ಕೋಟೆ)–3. 3,000 ಮೀ. ಓಟ: ನಾಗರಾಜ (ಮಾರಗೌಡನಹಳ್ಳಿ, ಕೆ.ಆರ್.ನಗರ. ಕಾಲ: 10 ನಿಮಿಷ 41.31 ಸೆಕೆಂಡ್)–1, ಗುರುಕಿರಣ್‌ (ಅತ್ತಿಗೋಡು ಶಾಲೆ, ಪಿರಿಯಾಪಟ್ಟಣ)–2, ಮಹದೇವ ಪ್ರಸಾದ್ (ಸರ್ಕಾರಿ ಶಾಲೆ, ದೊಡ್ಡಕವಲಂದೆ, ನಂಜನಗೂಡು)–3. ಲಾಂಗ್‌ಜಂಪ್: ಪ್ರವರ್ತ (ಎಸ್‌ವಿಇಐ, ಮೈಸೂರು ಗ್ರಾಮಾಂತರ. ದೂರ: 5.86 ಮೀಟರ್ಸ್)–1, ಸುಧನ್ವಾ (ರಾಮಕೃಷ್ಣಕೇಂದ್ರ)–2, ಜಶ್ವಂತ್ (ರೋಟರಿ ಶಾಲೆ, ಹುಣಸೂರು)–3. ಹೈಜಂಪ್‌: ಪ್ರವರ್ಥ (ಎಸ್‌ವಿಇಐ, ಮೈಸೂರು ಗ್ರಾಮಾಂತರ. ಎತ್ತರ:1.63 ಮೀ.) ರಾಹುಲ್‌ (ಸರ್ಕಾರಿ ಪ್ರೌಢಶಾಲೆ, ಕಟ್ಟೆಮಳಲವಾಡಿ, ಹುಣಸೂರು)–2, ಪ್ರೀತಂ (ಸರ್ಕಾರಿ ಪ್ರೌಢಶಾಲೆ, ದಡದಹಳ್ಳಿ, ಎಚ್‌.ಡಿ.ಕೋಟೆ)–3.‌

ಬಾಲಕಿಯರ ವಿಭಾಗ 100 ಮೀ. ಓಟ: ಜೀವಿತಾ (ಸಿಟಿಜನ್ಸ್ ಇಂಗ್ಲಿಷ್‌ ಶಾಲೆ ನಂಜನಗೂಡು. ಕಾಲ; 13.06 ಸೆಕೆಂಡ್)–1 ವರ್ಷಿಣಿ (ಆದರ್ಶಶಾಲೆ ನಂಜನಗೂಡು)–2 ಜನನಿ (ಸಿಕೆಸಿ ಪ್ರೌಢಶಾಲೆ ಮೈಸೂರು ದಕ್ಷಿಣ)–3. 200 ಮೀ. ಓಟ: ಜೀವಿತಾ ಜೀವಿತಾ (ಸಿಟಿಜನ್ಸ್ ಇಂಗ್ಲಿಷ್‌ ಶಾಲೆ ನಂಜನಗೂಡು. ಕಾಲ; 27.18 ಸೆಕೆಂಡ್)–1 ದೀಪಿಕಾ (ವಾಣಿವಿಲಾಸ ಅರಸ್‌ ಪ್ರೌಢಶಾಲೆ ಮೈಸೂರು ಉತ್ತರ)–2 ವರ್ಷಿಣಿ (ಆದರ್ಶ ಶಾಲೆ ನಂಜನಗೂಡು)–3. 400 ಮೀ. ಓಟ: ನಯನ (ಸಿಟಿಜನ್ಸ್ ಶಾಲೆ ನಂಜನಗೂಡು. ಕಾಲ: 1 ನಿಮಿಷ 5.88 ಸೆಕೆಂಡ್‌)–1 ಅನನ್ಯಾ (ನಿರ್ವಾಣಸ್ವಾಮಿ ಶಾಲೆ ತಿ.ನರಸೀಪುರ)–2 ಮೋನಿಷಾ (ಆದರ್ಶ ವಿದ್ಯಾಲಯ ಕೆ.ಆರ್‌.ನಗರ)–3. ಲಾಂಗ್ ಜಂಪ್: ದೀಪಿಕಾ (ವಾಣಿವಿಲಾಸ ಶಾಲೆ ಮೈಸೂರು ಉತ್ತರ. ದೂರ: 4.88 ಮೀ.)–1 ರ್ಚನಾ (ಜಿಎಚ್‌ಎಸ್‌ ಮಾರಗೊಂಡನಹಳ್ಳಿ ಕೆ.ಆರ್‌.ನಗರ)–2 ಪ್ರೇಮಾ (ಜಿಜಿಜೆ ಕಾಲೇಜು ಕೆ.ಆರ್.ಕಾಲೇಜು) 3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.