ADVERTISEMENT

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ 4X400ಮೀ ರಿಲೇ ಫೈನಲ್‌ಗೆ ಭಾರತ ಪುರುಷರ ತಂಡ

ಪಿಟಿಐ
Published 26 ಆಗಸ್ಟ್ 2023, 19:51 IST
Last Updated 26 ಆಗಸ್ಟ್ 2023, 19:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬುಡಾಪೆಸ್ಟ್‌: ಭಾರತ ಪುರುಷರ 4X400 ಮೀ. ರಿಲೇ ತಂಡ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪ್ರವೇಶಿಸಿ ಅಮೋಘ ಸಾಧನೆ ಮಾಡಿತು. ಈ ಹಾದಿಯಲ್ಲಿ ಏಷ್ಯನ್‌ ದಾಖಲೆಯನ್ನು ಸ್ಥಾಪಿಸಿತು.

ಶನಿವಾರ ನಡೆದ ಅರ್ಹತಾ ಹಂತದಲ್ಲಿ ಮೊದಲ ಹೀಟ್‌ನಲ್ಲಿ ಓಡಿದ ಮೊಹಮ್ಮದ್‌ ಅನಾಸ್ ಯಹ್ಯಾ, ಅಮೋಜ್ ಜೇಕಬ್, ಮೊಹಮ್ಮದ್‌ ಅಜ್ಮಲ್ ಮತ್ತು ರಾಜೇಶ್‌ ರಮೇಶ್‌ ಅವರನ್ನೊಳಗೊಂಡ ಭಾರತ ತಂಡ 2 ನಿ. 59.05 ಸೆ.ಗಳೊಂದಿಗೆ ಗುರಿ ತಲುಪಿತು. ಮೊದಲ ಹೀಟ್‌ನಲ್ಲಿ ಅಮೆರಿಕ (2 ನಿ. 58.47 ಸೆ.) ಬಳಿಕ ಎರಡನೇ ಸ್ಥಾನ ಗಳಿಸಿತು.

ಭಾರತ ರಿಲೇ ತಂಡವು ಜಪಾನ್‌ ತಂಡದ (2 ನಿ. 59.51 ಸೆ.) ಹೆಸರಿನಲ್ಲಿದ್ದ ಏಷ್ಯನ್‌ ದಾಖಲೆಯನ್ನು ಮುರಿಯಿತು. ಈ ಹಿಂದಿನ ರಾಷ್ಟ್ರೀಯ ದಾಖಲೆಯನ್ನು (3 ನಿ. 0.25 ಸೆ.) ಉತ್ತಮಪಡಿಸಿಕೊಂಡಿತು.

ADVERTISEMENT

ಭಾರತ ತಂಡ ಒಟ್ಟಾರೆಯಾಗಿ ಎರಡನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದೆ. ಬ್ರಿಟನ್‌ (2 ನಿ. 59.42 ಸೆ.) ಮತ್ತು ಜಮೈಕಾ (2 ನಿ. 59.82) ತಂಡಗಳಿಗಿಂತ ಉತ್ತಮ ಸಮಯ ಕಂಡುಕೊಂಡಿತು. ಫೈನಲ್‌ ಭಾನುವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.