ಚೆನ್ನೈ: ರೋಚಕ ಹಣಾಹಣಿಯಲ್ಲಿ ಶುಭಂಕರ್ ಡೇ ಗಳಿಸಿಕೊಟ್ಟ ಜಯದಿಂದ ಅವಧ್ ವಾರಿಯರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಗುರುವಾರ ಗೆಲುವು ಸಾಧಿಸಿತು. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಾರ್ತ್ ಈಸ್ಟರ್ನ್ ವಾರಿಯರ್ಸ್ ತಂಡವನ್ನು ಅವಧ್ 4–3ರಲ್ಲಿ ಮಣಿಸಿತು.
ಇಸಾರ–ಕೆಎಚ್‌ನಾ ಜೋಡಿಯನ್ನು ಅವಧ್ ತಂಡದ ಹ್ಯೂನ್ ಮತ್ತು ಪೆಡ್‌ಸೆನ್ ಸೋಲಿಸಿದರೆ, ಟ್ರಂಪ್ ಪಂದ್ಯದಲ್ಲಿ ನಾರ್ತ್ ಈಸ್ಟರ್ನ್‌ನ ಯೂ 2–1ರಲ್ಲಿ ವಿನ್ಸೆಂಟ್ ವಿರುದ್ಧ ಗೆದ್ದರು. ಬಿವೆನ್ ಜಾಂಗ್ ಎದುರು ಎಂ.ಲೀ ಗೆದ್ದು ನಾರ್ತ್ ಈಸ್ಟರ್ನ್‌ನ ಮುನ್ನಡೆ ಹೆಚ್ಚಿಸಿದರು. ಅವಧ್‌ನ ಟ್ರಂಪ್ ಪಂದ್ಯದಲ್ಲಿ ಹೂನ್–ಚೀಲ್ ಜೋಡಿ ಗರಗೊ–ಹ್ಯೂ ಜೋಡಿಯನ್ನು ಮಣಿಸಿದರು. ಹೀಗಾಗಿ ಅಂತಿಮ ಪಂದ್ಯದ ರೋಚಕತೆ ಹೆಚ್ಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.