ಚಂಡೀಗಡ (ಪಿಟಿಐ): ದೆಹಲಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಬಾಕ್ಸರ್ ಕೌರ್ ಸಿಂಗ್ (74) ಅವರು ಗುರುವಾರ ಹರಿಯಾಣದ ಕುರುಕ್ಷೇತ್ರದ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಖನಾಲ್ ಖುರ್ದ್ ಗ್ರಾಮದಲ್ಲಿ ನೆಲೆಸಿದ್ದರು. 1982ರ ದೆಹಲಿ ಏಷ್ಯನ್ ಗೇಮ್ಸ್‌ನ ಹೆವಿವೇಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. 1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ ಅವರು ದೇಶವನ್ನು ಪ್ರತಿನಿಧಿಸಿದ್ದರು.
ಕ್ರೀಡಾಕ್ಷೇತ್ರದ ಸಾಧನೆಗಾಗಿ ಅವರಿಗೆ 1982ರಲ್ಲಿ ಅರ್ಜುನ ಮತ್ತು 1983ರಲ್ಲಿ ಪದ್ಮಶ್ರೀ ಪುರಸ್ಕಾರಗಳು ಒಲಿದುಬಂದಿದ್ದವು.
ಅಲಿ ಜೊತೆ ‘ಫೈಟ್’: 1980ರಲ್ಲಿ ಅವರು ಬಾಕ್ಸಿಂಗ್ ದಂತಕತೆ ಮುಹಮದ್ ಅಲಿ ಜೊತೆ ಪ್ರದರ್ಶನ ಪಂದ್ಯದಲ್ಲಿ ಸೆಣಸಾಡಿದ್ದರು.
ಪಠ್ಯಪುಸ್ತಕದಲ್ಲಿ ಸೇರ್ಪಡೆ: ನಾಲ್ವರು ದಿಗ್ಗಜ ಕ್ರೀಡಾಪಟುಗಳ ಯಶೋಗಾಥೆಯನ್ನು ಪ್ರೌಢ ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡುವುದಾಗಿ ಪಂಜಾಬ್ ಸರ್ಕಾರ ಈ ತಿಂಗಳ ಆರಂಭದಲ್ಲಿ ಪ್ರಕಟಿಸಿತ್ತು. ಆ ನಾಲ್ವರಲ್ಲಿ ಕೌರ್ ಸಿಂಗ್ ಒಬ್ಬರು. ಹಾಕಿ ತಾರೆ ಬಲಬೀರ್ ಸಿಂಗ್, ದಿಗ್ಗಜ ಅಥ್ಲೀಟ್‌ಗಳಾದ ಮಿಲ್ಖಾ ಸಿಂಗ್ ಮತ್ತು ಗುರಬಚನ್ ಸಿಂಗ್ ರಾಂಧವ (ಹರ್ಡಲ್ಸ್ ಮತ್ತು ಹೈಜಂಪ್) ಉಳಿದ ಮೂವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.