ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮೇಲೆ ಮತ್ತೆ ಅಮಾನತು ಹೇರಬೇಕೆಂದು ಒಲಿಂಪಿಕ್ ಪದಕ ವಿಜೇತ ಪೈಲ್ವಾನ್ ಬಜರಂಗ್ ಪೂನಿಯಾ ಗುರುವಾರ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್‌ಗೆ ಒತ್ತಾಯಿಸಿದ್ದಾರೆ. ಸಂಜಯ್ ಸಿಂಗ್ ನೇತೃತ್ವದ ಫೆಡರೇಷನ್, ಕುಸ್ತಿಪಟುಗಳಲ್ಲಿ ‘ಭಯ ಮತ್ತು ಶೋಷಣೆಯ ಭಾವ ಮೂಡಿಸಿದೆ’ ಎಂದು ದೂರಿದ್ದಾರೆ.
ಫೆಡರೇಷನ್ ಮೇಲೆ ಕಳೆದ ಆಗಸ್ಟ್‌ನಲ್ಲಿ ಹೇರಿದ್ದ ನಿಷೇಧವನ್ನು, ಯುಡಬ್ಲ್ಯುಡಬ್ಲ್ಯು ಕಳೆದ ಮಂಗಳವಾರ ಹಿಂಪಡೆದಿತ್ತು. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ನಡೆದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಬಜರಂಗ್, ಸಾಕ್ಷಿ, ವಿನೇಶಾ ವಿರುದ್ಧ ಯಾವುದೇ ರೀತಿಯ ತಾರತಮ್ಯ ನಡೆಸಬಾರದು ಎಂದು ಲಿಖಿತ ಖಾತರಿ ನೀಡಬೇಕೆಂದೂ ನಿರ್ದೇಶನ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.