ಮಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷ ಮತ್ತು ಮಹಿಳಾ ವಿಭಾಗಗಳ ಪ್ರಶಸ್ತಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪಾಲಾಗಿದೆ. ಸತತ 16ನೇ ಬಾರಿ ಸಂಸ್ಥೆ ಈ ಸಾಧನೆ ಮಾಡಿದೆ.
ಪುರುಷರ ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕನ್ನಡ ತಂಡ ಹಾಸನ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಸಾಣೇನಹಳ್ಳಿ ಸರ್ಕಾರಿ ಕಾಲೇಜು ತಂಡವನ್ನು 35-16, 35-18ರಲ್ಲಿ ಮಣಿಸಿತು. ಸೆಮಿಫೈನಲ್‌ನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಸೇಂಟ್ ಆ್ಯಂಟನಿ ಕಾಲೇಜು ತಂಡವನ್ನು ಹಾಗೂ ಹಾಸನ ತಂಡ, ವಿಜಯನಗರ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಹರಪನಹಳ್ಳಿಯ ಸರ್ಕಾರಿ ಕಾಲೇಜು ತಂಡವನ್ನು ಸೋಲಿದ್ದವು.
ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ ಹಾಸನದ ಸಾಣೇನಹಳ್ಳಿ ಸರ್ಕಾರಿ ಕಾಲೇಜು ತಂಡವನ್ನು 35-20, 35-16ರಲ್ಲಿ ಸೋಲಿಸಿತು. ಸೆಮಿಫೈನಲ್ಸ್‍ನಲ್ಲಿ ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸಿದ ಬೆಟ್ಟದಪುರ ಸರ್ಕಾರಿ ಕಾಲೇಜು ತಂಡವನ್ನು ಸೋಲಿಸಿತ್ತು. ಮತ್ತೊಂದು ಸೆಮಿಫೈನಲ್‌ನಲ್ಲಿ ಹಾಸನ ಜಿಲ್ಲಾ ತಂಡ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಶಿರಸಿ ಕಾಲೇಜು ತಂಡವನ್ನು ಸೋಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.