ADVERTISEMENT

ಪ್ರಸಾದ್‌ ರಾವ್ ಮಿಲಿಯನ್ ಟ್ರೋಫಿ ಅನಾವರಣ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 15:06 IST
Last Updated 31 ಜನವರಿ 2024, 15:06 IST
ಬೆಂಗಳೂರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿ.ವಿ. ಪ್ರಸಾದ್ ರಾವ್ ಅವರು ತಮ್ಮ ಪ್ರಾಯೋಜಕತ್ವದ ಮಿಲಿಯನ್ 2024 ಟ್ರೋಫಿಯನ್ನು ಬೆಂಗಳೂರು ಟರ್ಫ್ ಕ್ಲಬ್ ಅಧ್ಯಕ್ಷ ಅರವಿಂದ್ ರಾಘವನ್ ಅವರಿಗೆ ಹಸ್ತಾಂತರಿಸಿದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿ.ವಿ. ಪ್ರಸಾದ್ ರಾವ್ ಅವರು ತಮ್ಮ ಪ್ರಾಯೋಜಕತ್ವದ ಮಿಲಿಯನ್ 2024 ಟ್ರೋಫಿಯನ್ನು ಬೆಂಗಳೂರು ಟರ್ಫ್ ಕ್ಲಬ್ ಅಧ್ಯಕ್ಷ ಅರವಿಂದ್ ರಾಘವನ್ ಅವರಿಗೆ ಹಸ್ತಾಂತರಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಶುಕ್ರವಾರ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ನಡೆಯಲಿರುವ ಸಿ.ವಿ. ಪ್ರಸಾದ್ ರಾವ್ ಮಿಲಿಯನ್ ಟ್ರೋಫಿಯನ್ನು ಬುಧವಾರ ಅನಾವರಣಗೊಳಿಸಲಾಯಿತು. ಈ ರೇಸ್ ಶುಕ್ರವಾರ ನಡೆಯಲಿದೆ.

ಬಿ.ಟಿ.ಸಿ ಮತ್ತು ಸಿ.ವಿ.ಪ್ರಸಾದ್‌ ರಾವ್‌ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿರುವ ಈ ರೇಸ್‌ನ ಒಟ್ಟು ಬಹುಮಾನದ ಮೊತ್ತ ₹10 ಲಕ್ಷ. ಇಲ್ಲಿ ಗೆಲ್ಲುವ ಕುದುರೆ ಮಾಲೀಕರಿಗೆ ₹50 ಸಾವಿರ ಮೌಲ್ಯದ ಟ್ರೋಫಿಯೊಂದಿಗೆ ಸುಮಾರು ₹5 ಲಕ್ಷ ನಗದು ದೊರೆಯಲಿವೆ. ರೇಸ್‌ನಲ್ಲಿ ಹತ್ತು ಕುದುರೆಗಳು ಭಾಗವಹಿಸಲಿವೆ.

‘ಕುದುರೆಗಳ ಮೇಲಿನ ಪ್ರೀತಿ ಹಾಗೂ ರೇಸ್‌ ಮೇಲಿನ ಉತ್ಸಾಹ ಈ ರೇಸ್‌ಗೆ ಪ್ರಾಯೋಜಕತ್ವ ನೀಡಲು ಪ್ರೇರಣೆಯಾಗಿದೆ. ಇನ್ನು ಮುಂದೆ ಪ್ರತಿವರ್ಷ ಇಂತಹ ಒಂದು ರೇಸ್‌ ಪ್ರಾಯೋಜಿಸಲು ಉತ್ಸುಕನಾಗಿದ್ದೇನೆ ಮತ್ತು ಇದಕ್ಕೆ ಅವಕಾಶ ಕಲ್ಪಿಸಿ ಕೊಟ್ಟ ಬಿ.ಟಿ.ಸಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ಸಿ.ವಿ. ಪ್ರಸಾದ್ ರಾವ್ ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ರೇಸ್‌ ನ ಡ್ರಾ ಕೂಡ ನಡೆಸಲಾಯಿತು.

ಬಿ.ಟಿ.ಸಿ. ಅಧ್ಯಕ್ಷ ಅರವಿಂದ್ ರಾಘವನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.