ADVERTISEMENT

ಟ್ರ್ಯಾಕ್‌ ಪರಿಶೀಲಿಸಿದ ಬಿಟಿಸಿ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 20:00 IST
Last Updated 16 ನವೆಂಬರ್ 2019, 20:00 IST
ಬೆಂಗಳೂರು ಟರ್ಫ್‌ ಕ್ಲಬ್‌
ಬೆಂಗಳೂರು ಟರ್ಫ್‌ ಕ್ಲಬ್‌   

ಬೆಂಗಳೂರು: ಇಲ್ಲಿಯ ಬೆಂಗಳೂರು ಟರ್ಫ್ ಕ್ಲಬ್‌ನ (ಬಿಟಿಸಿ) ರೇಸ್‌ ಟ್ರ್ಯಾಕ್‌ ಅನ್ನು ಅಧಿಕಾರಿಗಳು ಶನಿವಾರ ಪರಿಶೀಲಿಸಿದರು.

ಶುಕ್ರವಾರ ಚಳಿಗಾಲದ ರೇಸ್‌ಗಳ ಆರಂಭಿಕ ಸುತ್ತಿನಲ್ಲಿಯೇ ಕುದುರೆಗಳು ಬಿದ್ದು ಜಾಕಿಗಳು ಗಾಯಗೊಂಡಿದ್ದರು. ಹೀಗಾಗಿ ಫೇವರಿಟ್ ಅಲ್ಲದ ಕುದುರೆ ಗಳು ಗೆದ್ದಿದ್ದವು. ಇದರಿಂದಾಗಿ ಪಂಟರ್‌ಗಳು ಪ್ರತಿಭಟನೆ ನಡೆಸಿದ್ದರು. ಕೆಲವರು ಇಲ್ಲಿಯ ಪೀಠೋಪಕರಣಗಳನ್ನೂ ಮುರಿದು ಹಾಕಿದ್ದರು. ನಂತರ ಪೊಲೀಸರು ಲಾಠಿ ಪ್ರಹಾರ ನಡೆಸಿ ಗಲಾಟೆಯನ್ನು ನಿಯಂತ್ರಿಸಿದ್ದರು.

‘ಟ್ರ್ಯಾಕ್‌ ಸರಿಯಿಲ್ಲ’ ಎಂದು ಜಾಕಿ ಗಳು ದೂರಿದ್ದರು. ಭಾರತ ಜಾಕಿ ಸಂಸ್ಥೆ ಕೂಡ ಟ್ರ್ಯಾಕ್‌ ಗುಣಮಟ್ಟದ ಕುರಿತು ಆಕ್ಷೇಪಿಸಿ ಪತ್ರ ಬರೆದಿದೆ. ಈ ಹಿನ್ನೆಲೆ ಯಲ್ಲಿ ಅಧಿಕಾರಿಗಳು ಪರಿಶೀಲಿಸಿದರು.

ADVERTISEMENT

‘ಹೋದ ಬುಧವಾರ ಇದೇ ಟ್ರ್ಯಾಕ್‌ ನಲ್ಲಿ ಕೆಲವು ಪ್ರಾಯೋಗಿಕ ರೇಸ್‌ಗಳನ್ನು ನಡೆಸಿ ನೋಡಲಾಗಿತ್ತು. ಚೆನ್ನಾಗಿ ಆಗಿದ್ದ ಕಾರಣ ಶುಕ್ರವಾರ ರೇಸ್‌ಗಳನ್ನು ಸಂಘಟಿಸಲಾಗಿತ್ತು. ಮುಂದಿನ ವಾರದ ರೇಸ್‌ಗಳು ಸಾಂಗವಾಗಿ ನಡೆಯುವ ಭರವಸೆ ಇದೆ’ ಎಂದು ಬಿಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾನುವಾರದ ಮುಂಬೈ ರೇಸ್‌ನ ಆಫ್‌ಕೋರ್ಸ್‌ ಬೆಟ್ಟಿಂಗ್ ಇಲ್ಲಿ ನಡೆಯಲಿದೆ. ಅದಕ್ಕಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.