ADVERTISEMENT

ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಮೌಂಟ್ಸ್‌ ಕ್ಲಬ್‌, ಬೀಗಲ್ಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 0:17 IST
Last Updated 2 ಅಕ್ಟೋಬರ್ 2024, 0:17 IST
<div class="paragraphs"><p>ಪ್ರಶಸ್ತಿಯೊಂದಿಗೆ ಮೌಂಟ್ಸ್‌ ಕ್ಲಬ್‌ ತಂಡ ತಂಡ. (ಮಂಡಿಯೂರಿದವರು) ಎಡದಿಂದ ಅವನಿ, ಸನಾತನಿ, ಜಾನವಿ, ಆರಾಧನಾ, ತಸ್ಮೈ, ಸಾನ್ವಿ (ನಿಂತಿರುವವರು) ಅನನ್ಯಾ, ನೀಲಯಾ, ತಾರುಷಿ, ಜಯವಂತಿ ಶ್ಯಾಮ್ (ಕೋಚ್), ಶ್ರೀದೇವಿ, ನಿಧಿ, ಅಡೆಲೆ, ಅದಿತ್ರಿ</p></div>

ಪ್ರಶಸ್ತಿಯೊಂದಿಗೆ ಮೌಂಟ್ಸ್‌ ಕ್ಲಬ್‌ ತಂಡ ತಂಡ. (ಮಂಡಿಯೂರಿದವರು) ಎಡದಿಂದ ಅವನಿ, ಸನಾತನಿ, ಜಾನವಿ, ಆರಾಧನಾ, ತಸ್ಮೈ, ಸಾನ್ವಿ (ನಿಂತಿರುವವರು) ಅನನ್ಯಾ, ನೀಲಯಾ, ತಾರುಷಿ, ಜಯವಂತಿ ಶ್ಯಾಮ್ (ಕೋಚ್), ಶ್ರೀದೇವಿ, ನಿಧಿ, ಅಡೆಲೆ, ಅದಿತ್ರಿ

   

–ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.

ಬೆಂಗಳೂರು: ಮೌಂಟ್ಸ್‌ ಕ್ಲಬ್‌ ಮತ್ತು ಬೀಗಲ್ಸ್‌ ಬಿ.ಸಿ ತಂಡಗಳು ರಾಜ್ಯ ಯೂತ್‌ (16 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡವು.

ADVERTISEMENT

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಬಾಲಕಿಯರ ಫೈನಲ್‌ ಲೀಗ್‌ನಲ್ಲಿ ನಿಧಿ ಉಮೇಶ್‌ (29 ಪಾಯಿಂಟ್ಸ್‌), ತಾರುಷಿ (21) ಮತ್ತು ನೀಲಯಾ ರೆಡ್ಡಿ (20) ಅವರ ಆಟದ ಬಲದಿಂದ ಮೌಂಟ್ಸ್ ತಂಡವು 92–62ರಿಂದ ಮೈಸೂರು ಜಿಲ್ಲಾ ‘ಎ’ ತಂಡವನ್ನು ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಯಂಗ್‌ ಓರಿಯನ್ಸ್‌ ಎಸ್‌.ಸಿ ತಂಡವು 46–29ರಿಂದ ಬೀಗಲ್ಸ್‌ ಬಿ.ಸಿ ತಂಡವನ್ನು ಸೋಲಿಸಿತು.

ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲಾ ತಂಡ ದ್ವಿತೀಯ ಸ್ಥಾನ ಪಡೆದರೆ, ಯಂಗ್‌ ಓರಿಯನ್ಸ್‌ ಮತ್ತು ಬೀಗಲ್ಸ್ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆಯಿತು.

ಬಾಲಕರ ಫೈನಲ್‌ ಲೀಗ್‌ನಲ್ಲಿ ಹರ್ಷನ್‌ (28) ಮತ್ತು ವೈಭವ್‌ (16) ಅವರ ಆಟದ ಬಲದಿಂದ ಬೀಗಲ್ಸ್‌ ತಂಡವು 56–19ರಿಂದ ಪಿಪಿಸಿ ತಂಡವನ್ನು ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಬಿ.ಸಿ.ಬಿ.ಸಿ. ತಂಡವು 78–69ರಿಂದ ಮೈಸೂರು ಜಿಲ್ಲಾ ಎ ತಂಡವನ್ನು ಮಣಿಸಿತು. ಬಿಸಿಬಿಸಿ ತಂಡ ದ್ವಿತೀಯ, ಪಿಪಿಸಿ ತೃತೀಯ ಮತ್ತು ಮೈಸೂರು ತಂಡ ನಾಲ್ಕನೇ ಸ್ಥಾನ ಪಡೆಯಿತು.

ವಿಜೇತ ತಂಡಗಳಿಗೆ ಎಫ್‌ಐಬಿಎ ಏಷ್ಯಾ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂದರಾಜ, ಕೆಎಸ್‌ಬಿಬಿಎ ಅಧ್ಯಕ್ಷ, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ, ಉಪಾಧ್ಯಕ್ಷ ಆರ್‌.ರಾಜನ್, ಡಿಸಿಪಿ ಶ್ರೀನಿವಾಸ ಗೌಡ ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.