ADVERTISEMENT

ಬ್ಯಾಸ್ಕೆಟ್‌ಬಾಲ್‌: ಜೆಎಸ್‌ಎಸ್‌ ಎಸ್‌ಟಿಯು ಚಾಂಪಿಯನ್

ಸೇಪಿಯಂಟ್ ಕಾಲೇಜು ರನ್ನರ್ ಅಪ್‌; ಥ್ರೋಬಾಲ್: ಜಿಎಸ್‌ಎಸ್‌ಎಸ್‌ಗೆ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 6:39 IST
Last Updated 26 ಅಕ್ಟೋಬರ್ 2024, 6:39 IST
ಮೈಸೂರಿನ ಎಸ್‌ಜಿಸಿಇ ಕಾಲೇಜಿನಲ್ಲಿ ಶುಕ್ರವಾರ ನಡೆದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಆಟಗಾರರು
ಮೈಸೂರಿನ ಎಸ್‌ಜಿಸಿಇ ಕಾಲೇಜಿನಲ್ಲಿ ಶುಕ್ರವಾರ ನಡೆದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಆಟಗಾರರು   

ಮೈಸೂರು: ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ತಂಡವು ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. 

ಇಲ್ಲಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣಾರ್ಥ ಶುಕ್ರವಾರ ನಡೆದ ಟೂರ್ನಿಯ ಫೈನಲ್‌ನಲ್ಲಿ ಆತಿಥೇಯ ತಂಡವು 92–74 ಪಾಯಿಂಟ್ ಅಂತರದಲ್ಲಿ ಸೇಪಿಯಂಟ್ ಕಾಲೇಜು ತಂಡವನ್ನು ಮಣಿಸಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಸೇಪಿಯಂಟ್‌ ಕಾಲೇಜು ತಂಡ 49–44 ಅಂತರದಲ್ಲಿ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ತಂಡದ ವಿರುದ್ಧ ರೋಚಕ ಜಯ ಸಾಧಿಸಿ, ಅಂತಿಮ ಘಟ್ಟಕ್ಕೆ ಪ್ರವೇಶಿಸಿತ್ತು. ಜೆಎಸ್‌ಎಸ್‌ ಎಸ್‌ಟಿಯು ತಂಡದವರು 40–15ರಿಂದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮದರ್ಜೆ ಕಾಲೇಜು ತಂಡದವರನ್ನು ಮಣಿಸಿ ಫೈನಲ್ ತಲುಪಿದ್ದರು.

ADVERTISEMENT

ಮಹಿಳಾ ಥ್ರೋಬಾಲ್ ಸ್ಪರ್ಧೆಯಲ್ಲಿ ಜಿಎಸ್‌ಎಸ್‌ಎಸ್‌ ಐಇಟಿಡಬ್ಯು ತಂಡದವರು 25–21, 17–25, 17–16ರಿಂದ ಎಸ್‌ಬಿಆರ್‌ಆರ್‌ ಮಹಾಜನ ಪ್ರಥಮ ದರ್ಜೆ ಕಾಲೇಜು ತಂಡದವರನ್ನು ಸೋಲಿಸಿದರು. 

ಸೆಮಿಫೈನಲ್‌ನಲ್ಲಿ ಜಿಎಸ್‌ಎಸ್‌ಎಸ್‌ ಐಇಟಿಡಬ್ಯು ತಂಡ 25–22, 25–25ರಿಂದ ಜೆಎಸ್‌ಎಸ್‌ ಎಸ್‌ಟಿಯು ಸೋಲಿಸಿದರೆ, ಎಸ್‌ಬಿಆರ್‌ಆರ್‌ ಮಹಾಜನ ಪ್ರಥಮ ದರ್ಜೆ ಕಾಲೇಜು ತಂಡದವರು 26–25, 25–20ರಿಂದ ಜೆಎಸ್‌ಎಸ್‌ ಮಹಿಳಾ ಕಾಲೇಜು ತಂಡದವರನ್ನು ಸೋಲಿಸಿ ಅಂತಿಮ ಘಟ್ಟ ಪ್ರವೇಶಿಸಿದ್ದರು.

ಟೂರ್ನಿಗೆ ಎಂ.ಬಿ.ಹುಚ್ಚಗೊಂಡರ್‌ ಚಾಲನೆ ನೀಡಿದರು. ಕುಲಪತಿ ಎ.ಎನ್.ಸಂತೋಷ್‌ ಕುಮಾರ್, ಪ್ರಾಂಶುಪಾಲ ಸಿ.ನಟರಾಜು, ಕುಲಸಚಿವ ಎಸ್‌.ಎ.ಧನರಾಜು ಹಾಜರಿದ್ದರು.

ಥ್ರೋಬಾಲ್‌ನಲ್ಲಿ ಚಾಂಪಿಯನ್ ಆದ ಜಿಎಸ್‌ಎಸ್‌ಎಸ್‌ ಐಇಟಿಡಬ್ಯು ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.