ADVERTISEMENT

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ವನಿತೆಯರು ರನ್ನರ್ಸ್ ಅಪ್‌

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 15:23 IST
Last Updated 15 ಏಪ್ರಿಲ್ 2024, 15:23 IST
<div class="paragraphs"><p>38ನೇ ಯೂತ್‌ ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ಸ್ ಅಪ್‌ ಸ್ಥಾನ ಪಡೆದ ಕರ್ನಾಟಕದ ಬಾಲಕಿಯರ ತಂಡ. </p></div>

38ನೇ ಯೂತ್‌ ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ಸ್ ಅಪ್‌ ಸ್ಥಾನ ಪಡೆದ ಕರ್ನಾಟಕದ ಬಾಲಕಿಯರ ತಂಡ.

   

ಬೆಂಗಳೂರು: ಕರ್ನಾಟಕದ ಬಾಲಕಿಯರ ತಂಡವು ಪಾಂಡಿಚೇರಿಯಲ್ಲಿ ನಡೆದ 38ನೇ ಯೂತ್‌ ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ಸ್ ಅಪ್‌ ಸ್ಥಾನ ಪಡೆದುಕೊಂಡಿತು.

ಸೋಮವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಕರ್ನಾಟಕ ತಂಡವು 60–65ರಿಂದ ತಮಿಳುನಾಡು ತಂಡಕ್ಕೆ ಮಣಿಯಿತು. ಕರ್ನಾಟಕ ತಂಡದ ಪರ ಖುಷಿ ನವೀನ್‌ ಮತ್ತು ನೀಲಯ್ಯ ರೆಡ್ಡಿ ತಲಾ 14, ಅದಿತಿ ಸುಬ್ರಮಣಿಯಂ 13 ಪಾಯಿಂಟ್ಸ್‌ ಗಳಿಸಿದರು. ತಮಿಳುನಾಡು ಪರ ಇ.ಎಸ್. ರಾಜಲಕ್ಷ್ಮಿ 14 ಮತ್ತು ದೇಶ್ಣಾ ಆರ್‌. ತಲಾ 14, ಯುವಶ್ರೀ ಮತ್ತು ನೂರಲ್ ಶಾಜಿತಾ ತಲಾ 13 ಪಾಯಿಂಟ್‌ಗಳೊಂದಿಗೆ ಮಿಂಚಿದರು.

ADVERTISEMENT

ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವು 59–50ರಿಂದ ಕೇರಳ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.