ನವದೆಹಲಿ: ಭಾರತದ ಸ್ಕ್ವಾಷ್ ಆಟಗಾರ ವೆಲವನ್ ಸೆಂಥಿಲ್‌ಕುಮಾರ್ ಅವರು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪಿಎಸ್‌ಎ ಚಾಲೆಂಜರ್ ಟೂರ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಆರಂಭಿಕ ಸುತ್ತಿನಲ್ಲಿ ಬೈ ಪಡೆದಿದ್ದ ರಾಷ್ಟ್ರೀಯ ಚಾಂಪಿಯನ್ ಸೆಂಥಿಲ್‌ಕುಮಾರ್, ಎರಡನೇ ಸುತ್ತಿನಲ್ಲಿ 11-4, 11-6, 11-7 ರಿಂದ ಫ್ರೆಂಚ್ ಆಟಗಾರ ಮ್ಯಾಟಿಯೊ ಕ್ಯಾರೊಗೆಟ್ ಅವರನ್ನು ಸೋಲಿಸಿದರು.
29 ನಿಮಿಷ ನಡೆದ ಹೋರಾಟದಲ್ಲಿ ಅಗ್ರಶ್ರೇಯಾಂಕದ ಸೆಂಥಿಲ್ ಪಾರಮ್ಯ ಮೆರೆದರು. ಅವರು ಮುಂದಿನ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಜೇಕಬ್ ಸೊಲ್ನಿಕಿ (ಜೆಕ್ ಗಣರಾಜ್ಯ) ಅವರನ್ನು ಎದುರಿಸಲಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ ಪಿಎಸ್‌ಎ ಚಾಲೆಂಜರ್ ಟೂರ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಆಕಾಂಕ್ಷಾ ಸಾಳುಂಕೆ ಎಂಟರ ಘಟ್ಟ ಪ್ರವೇಶಿಸಿದರು. ನಾಲ್ಕನೇ ಶ್ರೇಯಾಂಕದ ಆಕಾಂಕ್ಷಾ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು.
ಎರಡನೇ ಸುತ್ತಿನಲ್ಲಿ ಅವರು 11-8, 11-2, 11-9 ರಿಂದ ಗ್ವಾಟೆಮಾಲಾದ ವಿನಿಫರ್ ಬೊನಿಲ್ಲಾ ಅವರನ್ನು ಹಿಮ್ಮೆಟ್ಟಿಸಿದರು. ಅವರು ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಅಲಿನಾ ಬುಷ್ಮಾ ವಿರುದ್ಧ ಸೆಣಸಾಡುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.