ADVERTISEMENT

ಸ್ಕ್ವಾಷ್‌: ಸೆಮಿಗೆ ಶೌರ್ಯ, ಅನಾಹತ್‌ಗೆ ನಿರಾಸೆ

ಪಿಟಿಐ
Published 16 ಜುಲೈ 2024, 16:23 IST
Last Updated 16 ಜುಲೈ 2024, 16:23 IST
ಭಾರತದ ಶೌರ್ಯ ಬಾವ (ಬಲ) –ಎಕ್ಸ್‌ ಚಿತ್ರ
ಭಾರತದ ಶೌರ್ಯ ಬಾವ (ಬಲ) –ಎಕ್ಸ್‌ ಚಿತ್ರ   

ನವದೆಹಲಿ: ಭಾರತದ ಶೌರ್ಯ ಬಾವ ಅವರು ಹೂಸ್ಟನ್‌ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಅನಾಹತ್‌ ಸಿಂಗ್‌ ನಿರಾಸೆ ಅನುಭವಿಸಿದರು.

ದೆಹಲಿಯ 18 ವರ್ಷದ ಶೌರ್ಯ ಅವರು ಸೋಮವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ 2-11, 11-4, 10-12, 11-8, 12-10ರಿಂದ ಮಲೇಷ್ಯಾದ ಲೋ ವಾ-ಸರ್ನ್ ಅವರನ್ನು ಮಣಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಮುನ್ನಡೆದರು. ಈ ಮೂಲಕ ಕನಿಷ್ಠ ಕಂಚಿನ ಪದಕ ಖಚಿತಪಡಿಸಿದರು.

ವಿಶ್ವ ಜೂನಿಯರ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕರ ಘಟ್ಟ ತಲುಪಿದ ಭಾರತದ ಎರಡನೇ ಆಟಗಾರ ಎಂಬ ಹಿರಿಮೆಗೆ ಶೌರ್ಯ ಪಾತ್ರವಾದರು. 2014ರಲ್ಲಿ ಕುಶ್ ಕುಮಾರ್ ಸೆಮಿಫೈನಲ್‌ ಪ್ರವೇಶಿಸಿದ್ದರು. ಶೌರ್ಯ ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಮೊಹಮ್ಮದ್ ಜಕಾರಿಯಾ (ಈಜಿಪ್ಟ್‌) ಅವರನ್ನು ಎದುರಿಸುವರು. 

ADVERTISEMENT

ರಾಷ್ಟ್ರೀಯ ಚಾಂಪಿಯನ್‌ ಅನಾಹತ್‌ ಸಿಂಗ್‌ 8–11, 9–11, 11–5, 12–10, 11–13 ಐದು ಸೆಟ್‌ಗಳ ರೋಚಕ ಹಣಾಹಣಿಯಲ್ಲಿ ಈಜಿಪ್ಟ್‌ನ ನಾಡಿಯನ್ ಎಲ್ಹಮ್ಮಮಿ ಅವರಿಗೆ ಶರಣಾದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.