ADVERTISEMENT

ಎಚ್‌ಐಎಲ್‌ ಹರಾಜು: ಎರಡನೇ ದಿನ ವೆಗ್ನೆಝ್‌ಗೆ ₹40 ಲಕ್ಷ

ಪಿಟಿಐ
Published 14 ಅಕ್ಟೋಬರ್ 2024, 16:11 IST
Last Updated 14 ಅಕ್ಟೋಬರ್ 2024, 16:11 IST
   

ನವದೆಹಲಿ: ಬೆಲ್ಜಿಯಂನ ಮಿಡ್‌ಫೀಲ್ಡರ್‌ ವಿಕ್ಟರ್‌ ವೆಗ್ನೆಝ್ ಅವರು ಹಾಕಿ ಇಂಡಿಯಾ ಹರಾಜು ಪ್ರಕ್ರಿಯೆ ಎರಡನೇ ದಿನವಾದ ಸೋಮವಾರ ಅತಿ ದುಬಾರಿ ಆಟಗಾರ ಎನಿಸಿದರು. ಅವರು ₹40 ಲಕ್ಷ ಮೊತ್ತಕ್ಕೆ  ಸೂರ್ಮಾ ಹಾಕಿ ಕ್ಲಬ್ ಪಾಲಾದರು.

ಡಚ್‌ ಆಟಗಾರರಾದ ಥಿಯರಿ ಬ್ರಿಂಕ್‌ಮನ್ (₹38 ಲಕ್ಷ) ಮತ್ತು ಆರ್ಥರ್ ವಾನ್‌ ಡೊರೆನ್ (₹32 ಲಕ್ಷ) ಅವರೂ ಉತ್ತಮ ಮೊತ್ತಕ್ಕೆ ಕಳಿಂಗ ಲ್ಯಾನ್ಸರ್ಸ್‌ ಪಾಲಾದರು.

ಥಾಮಸ್ ಡೊಮಿನ್ ಅವರು ₹36 ಲಕ್ಷಕ್ಕೆ ಡೆಲ್ಲಿ ಎಸ್‌ಜಿ ಪೈಪರ್ಸ್‌ ಪಾಲಾದರೆ, ಆಸ್ಟ್ರೇಲಿಯಾದ ಆರನ್ ಝೆಲೆವ್‌ಸ್ಕಿ (₹27 ಲಕ್ಷ) ಅವರನ್ನು ಕಳಿಂಗ ಲ್ಯಾನ್ಸರ್‌ ಪಡೆಯಿತು. ಬ್ಲೇಕ್‌ ಗೋವರ್ಸ್‌ ಅವರು ₹27 ಲಕ್ಷಕ್ಕೆ ತಮಿಳುನಾಡು ಡ್ರಾಗನ್ಸ್‌ ಪಾಲಾದರು.

ADVERTISEMENT

ಮೊರಿಯಾಂಗ್‌ಥೆಮ್ಸ್‌ ರವಿಚಂದ್ರ (₹32 ಲಕ್ಷಕ್ಕೆ ಕಳಿಂಗ ಲ್ಯಾನ್ಸರ್ಸ್‌) ಮತ್ತು ಮೊಹಮ್ಮದ್ ರಾಹೀಲ್ ಮೌಸೀನ್‌ (₹25 ಲಕ್ಷಕ್ಕೆ ತಮಿಳುನಾಡು ಡ್ರಾಗನ್ಸ್) ಅವರು ಹರಾಜು ಪ್ರಕ್ರಿಯೆಯ ಎರಡನೇ ದಿನ ಉತ್ತಮ ಮೊತ್ತ ಗಳಿಸಿದ ಭಾರತದ ಪ್ರಮುಖ ಆಟಗಾರರು ಎನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.